ಪ್ರಾಣಿಗಳ ದತ್ತು ಪಡೆಯುವ ಕಾರ್ಯಕ್ಕೆ ಸಾಥ್ ನೀಡಿದ ನಟಿ ಅಮೂಲ್ಯ
1 min readಮೈಸೂರು: ನಟಿ ಅಮೂಲ್ಯ ಮೈಸೂರು ಮೃಗಾಲಯದಲ್ಲಿ ಪ್ರಾಣಿಯೊಂದನ್ನ ದತ್ತು ಪಡೆದಿದ್ದಾರೆ. ಈ ಮೂಲಕ ಪ್ರಾಣಿಗಳ ದತ್ತು ಪಡೆಯುವ ಕಾರ್ಯಕ್ಕೆ ಸಾಥ್ ನೀಡಿದ್ದಾರೆ.
ಈ ಹಿಂದೆ ಪ್ರಾಣಿಗಳ ದತ್ತು ಪಡೆಯುವ ಅಭಿಯಾನಕ್ಕೆ ನಟ ದರ್ಶನ್ ಮುನ್ನುಡಿ ಬರೆದಿದ್ದರು. ನಟ ದರ್ಶನ್ ಕಾರ್ಯಕ್ಕೆ ನಟಿ ಅಮೂಲ್ಯ ಸಾಥ್ ನೀಡಿದ್ದಾರೆ. ಹೌದು ಮೈಸೂರು ಮೃಗಾಲಯದಲ್ಲಿ ಅಮೂಲ್ಯ ಜಾಗ್ವಾರ್ ಅನ್ನು ದತ್ತು ಪಡೆದಿದ್ದಾರೆ. ಅಲ್ಲದೆ ಪ್ರಾಣಿ ದತ್ತು ಪಡೆದು ನಟ ದರ್ಶನ್ ಗೆ ಧನ್ಯವಾದ ತಿಳಿಸಿದ್ದಾರೆ.
ಪ್ರಾಣಿಗಳ ರಕ್ಷಣೆಗೆ ನಮ್ಮದೊಂದು ಅಳಿಲು ಸೇವೆ ಎಂದು ಟ್ವಿಟ್ ಮಾಡಿರುವ ಅಮೂಲ್ಯ ಜಾಗ್ವಾರ್ ಪ್ರಾಣಿ ದತ್ತು ಪಡೆದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.