ಮೈಸೂರಲ್ಲಿ ಲಾಕ್ಡೌನ್ ಮುಂದುವರಿಕೆ – ಯಾವುದೇ ಬದಲಾವಣೆ ಇಲ್ಲ- ಪೊಲೀಸ್ ಇಲಾಖೆ ಸೂಚನೆ!
1 min readಮೈಸೂರು: ಮೈಸೂರಿನಲ್ಲಿ ಚಾಲ್ತಿಯಲ್ಲಿರುವ ನಿರ್ಬಂಧದಲ್ಲಿ ಯಾವುದೇ ರೀತಿಯ ಸಡಿಲಿಕೆ ಇರುವುದಿಲ್ಲ. ದಿನನಿತ್ಯದ ಅಗತ್ಯ ಸೇವೆಗಳಾದ ತರಕಾರಿ, ದಿನಸಿ, ಹಣ್ಣು ಖರೀದಿಗೆ ಮಾತ್ರ ಅವಕಾಶ ಇದ್ದು, ಅನಗತ್ಯವಾಗಿ ಓಡಾಡದಂತೆ ಪೊಲೀಸ್ ಇಲಾಖೆ ಸೂಚಿಸಿದೆ.
ಅಲ್ಲದೆ ಮನೆಯಿಂದ ಹೊರಗೆ ಬರಬೇಕಾದರೆ ಮನೆಯ ಸಮೀಪ ಮಾತ್ರ ಅಗತ್ಯ ವಸ್ತು ಖರೀದಿಗೆ ಸೂಚಿಸಲಾಗಿದೆ. ಈ ನಡುವೆ ಅನಗತ್ಯವಾಗಿ ಅಗತ್ಯ ವಸ್ತುಗಳು ಬಿಟ್ಟು ಇತರೆ ಮಳಿಗೆ ತೆರೆದು ವ್ಯಾಪಾರ ಮಾಡುವ ವಿಚಾರ ಕೂಡ ಕಂಡು ಬಂದಿದ್ದು ಆಗೊಮ್ಮೆ ಇದು ಮುಂದುವರೆದರೆ ಅಂತವರ ವಿರುದ್ಧ ಕಾನೂನು ಕ್ರಮದ ಜೊತೆಗೆ ಮಳಿಗೆಯ ಪರವನಾಗಿ ರದ್ದು ಮಾಡಲಾಗುವುದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಅವರು.