ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬೇಗನೆ ಸೇವೆ ಒದಗಿಸುತ್ತೇವೆ – ನೂತನ ಎಸ್ಪಿ ಚೇತನ್
1 min readಮೈಸೂರು: ಮೈಸೂರಿನ ಅದೀಶ್ವರನಗರದಲ್ಲಿ ವ್ಯಕ್ತಿ ಕೊಲೆ ಪ್ರಕರಣದಲ್ಲಿ ಪೊಲೀಸರು ಇಬ್ಬರು ಕೊಲೆ ಆರೋಪಿಗಳ ಬಂಧಿಸಿದ್ದಾರೆ.
ತೇಜ್ ಮಾಲ್ ರಯೀಕಾ ಹಾಗೂ ಪ್ರಕಾಶ್ ಬಂಧಿತ ಆರೋಪಿಗಳು. ಜೂ.10ರಂದು ಮೈಸೂರಿ ಅದೀಶ್ವರನಗರದಲ್ಲಿ ಇಲವಾಲ ನಿವಾಸಿ ರವೀಶ್ ಕೊಲೆಯಾಗಿತ್ತು. ಮೂವರು ಒಟ್ಟಿಗೆ ಬಂಡವಾಳ ಹೂಡಿ ಮೊಬೈಲ್ ಅಂಗಡಿನಡೆಸುತ್ತಿದ್ದರು. ರವೀಶ್ ಹಣದ ವಿಚಾರವಾಗಿ ಗಲಾಟೆ ಮಾಡಿಕೊಂಡಿದ್ದ.
ರಾಜಸ್ಥಾನ ಮೂಲದ ತೇಜ್ ಮಾಲ್ ರಯೀಕಾ ಹಾಗೂ ಪ್ರಕಾಶ್ ಪಾರ್ಟಿ ಮಾಡುವುದಾಗಿ ರವೀಶ್’ನನ್ನು ಕರೆಸಿ ಕೊಲೆ ಮಾಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ ಅಂತ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಆರ್.ಚೇತನ್ ಹೇಳಿಕೆ ನಿಡಿದ್ದಾರೆ.
ಇನ್ನು ಮಾತು ಮುಂದುವರೆಸಿ ಮಾತನಾಡಿದ ನೂತನ ಎಸ್ಪಿ ಚೇತನ್ ಅವರು ಈ ಹಿಂದಿನ ಪೊಲೀಸ್ ವರಿಷ್ಠಾಧಿಕಾರಿಗಳಂತೆಯೇ ನಾನು ಸಹ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಬೇಗನೆ ಸೇವೆ ಒದಗಿಸುತ್ತೇವೆ. ಪೊಲೀಸ್ ಠಾಣೆ ಮೆಟ್ಟಿಲೇರಿದವರಿಗೆ ಸರಿಯಾದ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕ್ರಮ ವಹಿಸಲಿದೆ. ಜಿಲ್ಲೆಯಲ್ಲಿರುವ ಮಹಿಳೆಯರು, ದುರ್ಬಲ ವರ್ಗದವರಿಗೆ ನ್ಯಾಯ ಕೊಡಿಸುವ ಕೆಲಸ ಇಲಾಖೆಯಿಂದ ಆಗಲಿದೆ ಎಂದು ಇದೇ ವೇಳೆ ತಿಳಿಸಿದ್ರು.