ಫೇಸ್ಬುಕ್ ಖಾತೆಯ ಕಾಮೆಂಟ್ ಸೆಕ್ಷನ್ ತೆಗೆದ ಸಂಸದ ಪ್ರತಾಪ್ಸಿಂಹ
1 min readಮೈಸೂರು: ಮೈಸೂರು ಕೊಡುಗು ಸಂಸದ ಪ್ರತಾಪ್ ಸಿಂಹ ತಮ್ಮ ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ಖಾತೆಯಲ್ಲಿ ಕಾಮೆಂಟ್ ಸೆಕ್ಷನ್ ತೆಗೆದು ಪೋಸ್ಟ್ ಮಾಡುತ್ತಿದ್ದಾರೆ.
ಕಳೆದ ಎರಡ್ಮೂರು ದಿನದಿಂದ ಮಾಡುತ್ತಿರುವ ಪೋಸ್ಟ್ಗಳಿಗೆ ಕಾಮೆಂಟ್ ಸೆಕ್ಷನ್ ತೆಗೆದಿದ್ದಾರೆ. ಹೆಚ್ಚಿದ ಕಾಮೆಂಟ್ಗಳಿಂದ ಪ್ರತಾಪ್ಸಿಂಹ ದೂರ ಉಳಿದಿದ್ದಾರೆ. ಐಏಎಸ್ ಅಧಿಕಾರಿ ರೋಹಿಣಿ ಸಿಂದೂರಿ ವರ್ಗಾವಣೆಗೊಂಡನಂತರ ಪ್ರತಾಪ್ಸಿಂಹರ ಪ್ರತಿ ಪೋಸ್ಟ್ಗಳಿಗು ಸಾವಿರಾರು ನೆಗಟೀವ್ ಕಾಮೆಂಟ್ಗಳು ಬರುತ್ತಿದ್ದವು. ಕೆಲ ನೆಟ್ಟಿಗರು ಈ ಕಾಮೆಂಟ್ಗಳನ್ನೆ ಇಟ್ಟುಕೊಂಡು ಟ್ರಾಲ್ ಮಾಡುತ್ತಿದ್ದರು. ಇದೆ ಕಾರಣಕ್ಕೆ ಕಾಮೆಂಟ್ ಬಾಕ್ಸ್ ಅನ್ನೆಪ್ರತಾಪ್ಸಿಂಹ ತೆಗೆದಿದ್ದಾರೆ.