ಕೋವಿಡ್ ಟೆಲಿ ಕೇರ್ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನೂತನ ಪಾಲಿಕೆ ಆಯುಕ್ತರು
1 min readಮೈಸೂರು: ಶಿಲ್ಪಾನಾಗ್ ಅವರು ಪಾಲಿಕೆ ಆಯುಕ್ತೆಯಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅದನ್ನ ಉಳಿಸುಕೊಂಡು ಹೋಗುವ ಕೆಲ ಬದಲಾವಣೆ ಮಾಡುವ ಅಧಿಕಾರ ಸದ್ಯ ಇದೀಗಾ ನೂತನ ಪಾಲಿಕೆ ಆಯುಕ್ತರಿಗಿದೆ.
ಅದರಂತೆ ನೂತನ ಪಾಲಿಕೆ ಆಯುಕ್ತರಾದ ಶ್ರೀ ಲಕ್ಷ್ಮಿಕಾಂತ್ ರೆಡ್ಡಿ ಅವರು ಮೈಸೂರಿನ ರೋಟರಿ ಶಾಲೆಯಲ್ಲಿರುವ ಕೋವಿಡ್ ಟೆಲಿ ಕೇರ್ ನಿಯಂತ್ರಣ ಕೊಠಡಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿಯನ್ನ ಪರಿಶೀಲನೆ ನಡೆಸಿದ್ರು. ಈ ವೇಳೆ ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ. ಹಾಗೂ ಇದರಿಂದ ಜನರಿಗೆ ಹೇಗೆ ಮಾಹಿತಿ ತಲುಪುತ್ತದೆ ಇದರ ಅನುಕೂಲ ಏನು ಎಂಬ ಬಗ್ಗೆ ಅಲ್ಲಿನ ಸಿಬ್ಬಂದಿಗಳ ಬಳಿ ಮಾಹಿತಿ ಪಡೆದರು. ಟೆಲಿ ಕೇರ್‌ನಿಂದ ಆಗುತ್ತಿರುವ ಅನುಕೂಲ ತಿಳಿಸಿದ ಸಂಬಂಧಪಟ್ಟ ಅಧಿಕಾರಿಗಳು, ಇದರ ಕಾರ್ಯ ವೈಖರಿ ಬಗ್ಗೆ ತಿಳಿಸಿದರು. ಈ ವೇಳೆ ಸ್ವಯಂ ಸೇವಕರು ಕೂಡ ಉಪಸ್ಥಿತರಿದ್ದರು.