ಹಣ ವಿಥ್ ಡ್ರಾ ಮಾಡಲು ಬ್ಯಾಂಕ್ ಮುಂದೆ ಮುಗಿಬಿದ್ದ ಜನ: ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ ಗ್ರಾಮಸ್ಥರು
1 min readಮೈಸೂರು: ಹಣ ವಿಥ್ ಡ್ರಾ ಮಾಡಲು ಬ್ಯಾಂಕ್ ಮುಂದೆ ಜನ ಮುಗಿಬಿದ್ದ ಘಟನೆ ಪಿರಿಯಾಪಟ್ಟಣ ತಾಲೂಕಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಗ್ರಾಮದ ಬ್ಯಾಂಕ್ ಆಫ್ ಬರೋಡ ಮುಂದೆ ಘಟನೆ ನಡೆದಿದೆ. ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಮರೆತು ಜನ ಸಾಲುಗಟ್ಟಿ ನಿಂತಿದ್ದರು.
ಎಟಿಎಂ ಇಲ್ಲದ ಕಾರಣ ಹಣ ವಿಥ್ ಡ್ರಾಗೆ ಬ್ಯಾಂಕ್ ಮುಂದೆ ಕ್ಯೂ ನಿಂತಿದ್ದು, ಗ್ರಾ.ಪಂ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರ ನಿರ್ಲಕ್ಷ್ಯ ಆರೋಪ ಕೇಳಿಬಂದಿದೆ.