ಮೈಸೂರು ವಿವಿಯಿಂದ ಹೊಸ ಸಂಶೋಧನೆ: ರ್ಯಾಪಿಡ್ ಡಿಟೆಕ್ಷನ್ ಕಿಟ್ ವಿನ್ಯಾಸ
1 min readಮೈಸೂರು: ಮೈಸೂರು ವಿವಿಯಿಂದ ಹೊಸ ಸಂಶೋಧನೆ ನಡೆದಿದ್ದು, ರ್ಯಾಪಿಡ್ ಡಿಟೆಕ್ಷನ್ ಕಿಟ್ ವಿನ್ಯಾಸಗೊಳಿಸಿದೆ ಮೈಸೂರು ವಿಶ್ವವಿದ್ಯಾನಿಲಯ.
ಮೈಸೂರು ವಿವಿಯ ವಿಶ್ರಾಂತ ಕುಲಪತಿ ಹಾಗೂ ಹಿರಿಯ ವಿಜ್ಞಾನಿ ಫ್ರೋ.ರಂಗಪ್ಪ ನೇತೃತ್ವದಲ್ಲಿ ನಡೆದ ತಂಡದಿಂದ ಮೈಸೂರು ವಿವಿ- ಹೈದರಾಬಾದ್ನ ಖಾಸಗಿ ಸಂಸ್ಥೆ ಜಂಟಿಯಾಗಿ ಈ ಆವಿಷ್ಕಾರ ಮಾಡಲಾಗಿದ್ದು, ಲಾರ್ವೆನ್ ಬಯೋಲಾಜಿಕ್ ಪ್ರೈವೇಟ್ ಲಿಮಿಟೆಡ್ ಜೊತೆಗೆ ಆವಿಷ್ಕಾರ ನಡೆದಿದೆ.
ಈ ವಿಜ್ಞಾನಿಗಳ ತಂಡ ಕೋವಿಡ್-19 ರ್ಯಾಪಿಡ್ ಕಿಟ್ ವಿನ್ಯಾಸಗೊಳಿಸಿದೆ. ವಿನ್ಯಾಸಗೊಂಡ ಕಿಟ್ ಅನ್ನು ಫ್ರೋ.ರಂಗಪ್ಪ ಅವರು ಇಂದು ಬಿಡುಗಡೆ ಮಾಡಿದ್ದಾರೆ. ರಂಗಪ್ಪಗೆ ಮೈಸೂರು ವಿವಿ ಕುಲಪತಿ ಹೇಮಂತ್ ಕುಮಾರ್ ಸಾಥ್ ನೀಡಿದ್ದಾರೆ.
ಇದರ ಉಪಯೋಗವೇನು?
- ರೋಗದ ಲಕ್ಷಣ ಹೊಂದಿರೋ ವ್ಯಕ್ತಿ,ಕಫ, ಮೂಗಿನ ಸ್ರವಿಸುವಿಕೆ ಮತ್ತು ಲಾಲಾರಸ ಸೇರಿದಂತೆ ದ್ರವಗಳನ್ನ ಕೋವಿಡ್ ವೈರಸ್ ಪತ್ತೆ ಮಾಡಲು ಬಳಸಬಹುದು.
- ಈ ಕಿಟ್ ಅಭಿವೃದ್ಧಿ ಪಡಿಸಲು ಅಣುಜೀವ ವಿಜ್ಞಾನ, ನ್ಯಾನೋ ತಂತ್ರಜ್ಞಾನ ಮತ್ತು ಕೃತಕ ಬುದ್ದಿವಂತಿಕೆ ಸಂಬಂಧಿಸಿದ ತಂತ್ರಜ್ಞಾನ ಬಳಕೆ.
- ಕೇವಲ 100 ರೂಪಾಯಿಗೆ ಕಿಟ್ ದೊರೆಯುವಂತೆ ಅಭಿವೃದ್ಧಿ.
- ಭಾರತ ಸರ್ಕಾರದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ಅನುಮೋದನೆಗೆ ಕಳುಹಿಸಿದ ಮೈಸೂರು ವಿವಿ.
- ಐಸಿಎಂಆರ್ ನಿಂದ ಅನುಮೋದನೆ ಸಿಗುವ ವಿಶ್ವಾಸ ಇದೆ.
- ಐಸಿಎಂಆರ್ ನಿಂದ ಅನುಮೊದನೆ ದೊರೆತರೆ ಕಡಿಮೆ ಬೆಲೆಯಲ್ಲಿ ಲಭ್ಯವಿದೆ ಅಂತ ಪ್ರೊಫೆಸರ್ ಕೆ.ಎಸ್.ರಂಗಪ್ಪ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನು ಕೇವಲ 100 ರೂ ಗೆ ಸಿಗುವಂತೆ ಮಾಡುವುದು ನಮ್ಮ ಗುರಿ ಇದೆ. ಇಂಡಿಯನ್ ಮೆಡಿಕಲ್ ಕೌನ್ಸಲಿಂಗ್ ಕಳುಹಿಸಲಾಗುವುದು. ಇದು ಸುಮಾರು 90% ಕ್ಕಿಂತ ಹೆಚ್ಚು ಕೋವಿಡ್ ಪತ್ತೆ ಹಚ್ಚುವಿಕೆಯಲ್ಲಿ ನಿಖರತೆ ಇದೆ. ಮ್ಯೂಟೆಂಟ್ ವೈರಸ್ ನು ಬಳಸಿಕೊಂಡು ರಿಸರ್ಚ್ ಮಾಡಲಾಗಿದೆ. ಇದಕ್ಕಾಗಿ ಅಪ್ಲಿಕೇಶನ್ ಡೆವೆಲಪ್ ಮಾಡಲಾಗಿದೆ. ಇದರಲ್ಲಿ ಬಾರ್ ಕೋಡ್ ಸ್ಕ್ಯಾನ್ ಮಾಡಲಾಗಿದೆ ಅಂತ ಪ್ರೋ.ಕೆ.ಎಸ್.ರಂಗಪ್ಪ ಮಾಹಿತಿ ನೀಡಿದ್ದಾರೆ.