ಕೆ.ಆರ್ ಕ್ಷೇತ್ರದ ಎಲ್ಲಾ ವಾರ್ಡ್’ಗಳಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ

1 min read

ಮೈಸೂರು: ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕ ಎಸ್.ಎ ರಾಮದಾಸ್ ಅವರು ಇಂದು ಬೆಳಗ್ಗೆ 6 ಗಂಟೆಯಿಂದ ಕೆ.ಆರ್ ಕ್ಷೇತ್ರದಾದ್ಯಂತ 19 ವಾರ್ಡ್ ಗಳಲ್ಲಿ ‘ಕೊರೊನಾ – ನಿಮ್ಮ ಯೋಗಕ್ಷೇಮ ನಿಮ್ಮೊಂದಿಗೆ ನಾಲ್ಕು ಮಾತು- ನಿಮ್ಮ ಮನೆ ಬಾಗಿಲಿಗೆ’ ಜನಜಾಗೃತಿ ಕಾರ್ಯಕ್ರಮ ನೆರವೇರಿತು.

ಬೆಳಗ್ಗೆ 06 ಗಂಟೆಗೆ ಆಲನಹಳ್ಳಿ ಗಣಪತಿ ದೇವಸ್ಥಾನದಿಂದ ಕಾರ್ಯಕ್ರಮ ಆರಂಭವಾಯಿತು, ಕ್ಷೇತ್ರದ ಪ್ರಮುಖ ಸರ್ಕಲ್ ಗಳಲ್ಲಿ, ಮಾರುಕಟ್ಟೆ ಸ್ಥಳದಲ್ಲಿ ಮಾನ್ಯ ಶಾಸಕರು ಧ್ವನಿ ವರ್ಧಕದ ಮೂಲಕ ಮತ್ತು ಕರಪತ್ರಗಳ ಮೂಲಕ ಜನರಲ್ಲಿ ಜಾಗೃತಿ ಅಲ್ಲದೇ ನಾವು ನಿಮ್ಮೊಂದಿಗಿದ್ದೇವೆ ಭಯ ಪಡುವ ಅವಶ್ಯಕತೆ ಇಲ್ಲ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಸರ್ಕಾರದ ಜೊತೆಗೆ ನಾವೂ ಕೂಡ ಜಾಗೃತರಾಗಿರಬೇಕಾದದ್ದು ನಮ್ಮ ಆದ್ಯ ಕರ್ತವ್ಯವಾಗಿದೆ. ನಾವು ವಿಶೇಷವಾಗಿ ಕೆ.ಆರ್ ಕ್ಷೇತ್ರದಲ್ಲಿ ಕೋವಿಡ್ ನಿರ್ವಹಣೆಗಾಗಿ ಹಲವಾರು ಕ್ರಮಗಳನ್ನ ತೆಗೆದುಕೊಂಡಿದ್ದೇವೆ 2 ಅಂಬ್ಯುಲೆನ್ಸ್ ಗಳನ್ನು ಉಚಿತವಾಗಿ ನಗರಪಾಲಿಕೆಗೆ ನೀಡಿದ್ದೇವೆ. ಹಗಲು ರಾತ್ರಿ ನಮ್ಮ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಪೊಲೀಸರು, ಕೆಲಸ ನಿರ್ವಹಿಸುತ್ತಿದ್ದಾರೆ ಅವರಿಗೆ ಧನ್ಯವಾದಗಳನ್ನು ನಾವುಗಳು ಅರ್ಪಿಸಬೇಕು.

ವ್ಯಾಕ್ಸಿನೇಷನ್ ಡ್ರೈವ್ ಗಳು ಪ್ರಾರಂಭವಾಗಿದೆ ಕೊಂಚ ತೊಂದರೆಯಾದರೂ ಬರುವ 2 ತಿಂಗಳೊಳಗೆ ಸಾಕಷ್ಟು ಜನರಿಗೆ ವ್ಯಾಕ್ಸಿನ್ ಸಿಕ್ಕೇ ಸಿಕ್ಕುತ್ತದೆ, ಡಿಸಂಬರ್ ಒಳಗೆ 200 ಕೋಟಿ ಡೋಸ್ ಲಸಿಕೆ ಗಳು ಭಾರತದಲ್ಲಿ ಲಭ್ಯವಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಭರವಸೆ ನೀಡಿದೆ. ನಾವು ಕೂಡಾ 18 ರಿಂದ 44 ವಯಸ್ಸಿನವರಿಗೆ ಬೂತ್ ಮಟ್ಟದಲ್ಲಿ ಲಸಿಕೆ ನೀಡಲು ಯೋಜನೆಗಳನ್ನು ರೂಪಿಸುತ್ತಿದ್ದೇವೆ.

https://twitter.com/i/status/1400373681168076800

ಮೈಸೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ, ತಳ್ಳುಗಾಡಿ ವ್ಯಾಪಾರಿಗಳಿಗೆ ಟೌನ್ ಹಾಲ್ ನಲ್ಲಿ ಲಸಿಕೆ ನೀಡಲಾಗುತ್ತಿದೆ ನಿಮ್ಮ ಆರೋಗ್ಯವೂ ಬಹು ಮುಖ್ಯ ಆದ್ದರಿಂದ ಕೂಡಲೇ ನೀವುಗಳೂ ಲಸಿಕೆ ಪಡೆಯಿರಿ. ಈಗಾಗಲೇ ಸಣ್ಣ ಮಕ್ಕಳು ತಂದೆ ತಾಯಿಯನ್ನು ಕೋವಿಡ್ ನಿಂದ ಕಳೆದುಕೊಂಡಿದ್ದಾರೆ ಅಂತವರಿಗೆ ಪ್ರಧಾನಿ ಮೋದಿಜಿಯವರು “ಮಕ್ಕಳಿಗಾಗಿ PM-Cares” ಎಂಬುವ ಯೋಜನೆಯನ್ನು ರೂಪಿಸಿದ್ದಾರೆ ಅಂತಹ ಮಕ್ಕಳಿಗೆ 10 ಲಕ್ಷ ರೂ ಗಳು 18 ವರ್ಷ ತುಂಬಿದ ಮೇಲೆ ಸಿಗಲಿದೆ.

ಯಾರಾದರೂ ತಂದೆ ತಾಯಿಯನ್ನು ಕೋವಿಡ್ ನಿಂದ ಕಳೆದುಕೊಂಡ ಸಣ್ಣ ಮಕ್ಕಳಿದ್ದು ನಮ್ಮ ಗಮನಕ್ಕೆ ಬಂದಲ್ಲಿ ಖುದ್ದಾಗಿ ತೆರಳಿ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಡಲಿದ್ದೇವೆ, ಲಸಿಕೆ ಪಡೆದವರಲ್ಲಿ ಸಾವು ಕಡಿಮೆ ಎಂಬ ಅಂಕಿ ಅಂಶಗಳನ್ನು ನಾವು ನೋಡುತ್ತಿದ್ದೇವೆ ಆದ್ದರಿಂದ ದಯವಿಟ್ಟು ನಿಮ್ಮ ಸರದಿ ಬಂದಾಗ ಯಾವುದೇ ಭಯವಿಲ್ಲದೆ ಲಸಿಕೆ ಪಡೆಯಿರಿ, ಕೋವಿಡ್ ಮಹಾಮಾರಿಯನ್ನು ಓಡಿಸಲು ಇರುವ ಅಸ್ತ್ರ ಸಾಮಾಜಿಕ ಅಂತರ, ಮಾಸ್ಕ್ , ಶುಚಿತ್ವ ಹಾಗೂ ಲಸಿಕೆ. ಎಲ್ಲರೂ ನಮ್ಮ ನಮ್ಮ ಕರ್ತವ್ಯವನ್ನು ಅರಿತುಕೊಂಡು ಈ ಮಹಾಮಾರಿಯನ್ನು ಓಡಿಸೋಣ ಎಂದು ಎಲ್ಲೆಡೆಯಲ್ಲೂ ಘೋಷಣೆ ಕೂಗುತ್ತ ಕ್ಷೇತ್ರಾದ್ಯಂತ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವನ್ನು ಮಾನ್ಯ ಶಾಸಕರು ಮಾಡಿದರು.

ಸದರಿ ಕಾರ್ಯಕ್ರಮದಲ್ಲಿ ಕೆ.ಆರ್ ಕ್ಷೇತ್ರದ ಬಿಜೆಪಿ ಅಧ್ಯಕ್ಷರು ಪ್ರಧಾನಕಾರ್ಯದರ್ಶಿಗಳು, ಆಯಾ ವಾರ್ಡಿನ ನಗರಪಾಲಿಕಾ ಸದಸ್ಯರುಗಳು, ಬಿಜೆಪಿ ಪದಾಧಿಕಾರಿಗಳು,ಸ್ಥಳೀಯ ಮುಖಂಡರುಗಳು, ನಗರಪಾಲಿಕಾ ಅಧಿಕಾರಿಗಳು ಹಾಜರಿದ್ದರು.

About Author

Leave a Reply

Your email address will not be published. Required fields are marked *