ಕೋವಿಡ್-19: ನಂಜನಗೂಡು ತಾಲ್ಲೂಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ
1 min readಮೈಸೂರು: ಕೋವಿಡ್-19 ಹಿನ್ನೆಲೆ ಜಿಲ್ಲೆಯ ನಂಜನಗೂಡು ತಾಲ್ಲೂಕಿನ ತಾಲ್ಲೂಕು ಕಛೇರಿಯಲ್ಲಿ ನಂಜನಗೂಡು ತಾಲ್ಲೂಕಿನ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್ ಗಳ ವೈದ್ಯರೊಂದಿಗೆ ಹಾಗೂ ತಾಲ್ಲೂಕು ಟಾಸ್ಕ್ ಪೋರ್ಸ್ ಅಧಿಕಾರಿಗಳೊಂದಿಗೆ ಡಾ.ಬಿ.ಎಸ್.ಮಂಜುನಾಥಸ್ವಾಮಿ, ಅಪರ ಜಿಲ್ಲಾಧಿಕಾರಿ ಮೈಸೂರು ಜಿಲ್ಲೆ, ಮೈಸೂರು ರವರು ಮತ್ತು ಡಾ. ಸಿ ಎನ್ ವೆಂಕಟರಾಜು, ಉಪವಿಭಾಗಾಧಿಕಾರಿ ಮೈಸೂರು ವಿಭಾಗ ರವರು ಗುರುವಾರ ಸಭೆ ನಡೆಸಿದರು.
ತಾಲ್ಲೂಕಿನಲ್ಲಿ ಕೋವಿಡ್-19 ಸಂಬಂಧ ಜರುಗುತ್ತಿರುವ ಮನೆ ಮನೆ ಸಮೀಕ್ಷೆ, ಪಂಚಸೂತ್ರಗಳ ಪಾಲನೆ ಬಗ್ಗೆ ಪೋಸ್ಟರ್ ಅಂಟಿಸಿ ಗ್ರಾಮದ ಜನರಿಗೆ ಪಂಚಸೂತ್ರ ಕ್ರಮಗಳ ವಿವರಿಸುವ ಕೆಲಸದ ಪ್ರಗತಿ ಹಾಗೂ ಕೋವಿಡ್ ಮಿತ್ರ ಆಸ್ಪತ್ರೆಗಳಿಗೆ ಗ್ರಾಮದ ಜನರು ಭೇಟಿ ನೀಡುತ್ತಿರುವುದನ್ನು ಕುರಿತಂತೆ ಹಳ್ಳಿಗಳಿಗೆ ಕೋವಿಡ್ ಮಿತ್ರ ಸದುಪಯೋಗವಾಗುತ್ತಿರುವ ಬಗ್ಗೆ ಹಾಗೂ ಸರ್ಕಾರದ ಮಾರ್ಗಸೂಚಿಯಂತೆ ಕೋರೋನಾ ವಾರಿಯರ್ಸ್ ಗಳಿಗೆ ನೀಡಲಾಗುತ್ತಿರುವ ಲಸಿಕೆ ಬಗ್ಗೆ ತಹಶೀಲ್ದಾರ್ ನಂಜನಗೂಡು ತಾಲ್ಲೂಕು ರವರಿಂದ ಮಾಹಿತಿ ಪಡೆದರು.