ಮೈಸೂರಿನಲ್ಲಿ 21 ಬ್ಲಾಕ್ ಫಂಗಸ್ ಪ್ರಕರಣ ಇದೆ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
1 min readಮೈಸೂರು: ಮೈಸೂರಿನಲ್ಲಿ 21 ಬ್ಲಾಕ್ ಫಂಗಸ್ ಪ್ರಕರಣ ಇದೆ ಎಂದು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಹೇಳಿದ್ದಾರೆ.
ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿ ರೋಹಿಣಿ ಸಿಂಧೂರಿ ಮೈಸೂರಿನಲ್ಲಿ 21 ಬ್ಲಾಕ್ ಫಂಗಸ್ ಪ್ರಕರಣ ಇದೆ. ಕೆ.ಆರ್ ಆಸ್ಪತ್ರೆಯಲ್ಲಿ 17, jss ಆಸ್ಪತ್ರೆಯಲ್ಲಿ 3, ಅಪೋಲೋದಲ್ಲಿ 1. ಆದರೆ ಬ್ಲಾಕ್ ಫಂಗಸ್‌ನಿಂದ ಮೃತಪಟ್ಟವರು ಒಬ್ಬರು ಮಾತ್ರ ಎಂದು ತಿಳಿಸಿದರು.
ಈಗಾಗಲೇ ಬ್ಲಾಕ್ ಫಂಗಸ್ ಇದ್ದವರಿಗೆ ಚಿಕಿತ್ಸೆ ಕೊಡುತ್ತಿದ್ದೇವೆ. ಆದರೆ ರೋಗದ ಲಕ್ಷಣ ಇದ್ದವರು ಆದಷ್ಟು ಬೇಗನೆ ಆಸ್ಪತ್ರೆಗೆ ಬನ್ನಿ. ಈಗಾಗಲೇ ಹಲವರಿಗೆ ಕಣ್ಣಿನ ವರೆಗು ಸರ್ಜರಿ ಮಾಡಲಾಗಿದೆ.
ಒಂದೇ ಕಡೆ ಮೂಗು ಸೋರುವಿಕೆ, ತಲೆ ವಿಪರೀತ ನೋವು. ಇದೆಲ್ಲವು ಬ್ಲಾಕ್ ಫಂಗಸ್‌ನ ಸಿಮ್ಟಮ್ಸ್ ಆಗಿದೆ. ಈಗ ಕೆ.ಆರ್ ಆಸ್ಪತ್ರೆಯಲ್ಲಿರುವ ಎಲ್ಲಾ ರೋಗಿಗಳು ಕ್ಷೇಮವಾಗಿದ್ದಾರೆ. ಇದು ಗುಣಮುಖವಾಗಲು ಬರೋಬ್ಬರಿ ಮೂರು ವಾರವೇ ಬೇಕು. ಮೆಡಿಟೆಷನ್ ಹಾಗೂ ಸರ್ಜರಿಯೇ ಇದಕ್ಕೆ ಮದ್ದು. ಮೊದಲ ಹಂತದಲ್ಲೇ ಇದ್ದರೆ ಅದನ್ನ ಔಷಧೀಯಲ್ಲೇ ಗುಣಪಡಿಸಬಹುದು. ಆದರೆ ನಂತರ ಬಂದರೆ ಸರ್ಜರಿ ಅನಿವಾರ್ಯವಾಗಿದೆ. ಆದಷ್ಟು ಜನರು ಈ ಬಗ್ಗೆ ನಿಗಾ ವಹಿಸಿ ಎಂದು ಹೇಳಿದರು.
ಸರ್ಕಾರದಿಂದ ಗೈಡ್ ಲೈನ್ ಬಂದಿದೆ
ಸರ್ಕಾರದಿಂದ ಈಗಾಗಲೇ ಗೈಡ್ ಲೈನ್ ಬಂದಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಆಸ್ಪತ್ರೆ ಭೇಟಿ ಕೊಟ್ಟು ಮಾಹಿತಿ ಜೊತೆಗೆ ಸಭೆ ಮಾಡಬೇಕೆಂದು. ಹಾಗಾಗಿ ಕೆ.ಆರ್.ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೇನೆ. ಇದು ಮೊದಲ ಭೇಟಿಯಲ್ಲ, ಈಗಾಗಲೇ ಎರಡು ಬಾರಿ ಬಂದಿದ್ದೇನೆ. ಸದ್ಯ ಬ್ಲಾಕ್ ಫಂಗಸ್ ಹೆಚ್ಚಾಗಿರುವ ಕಾರಣ ಇಲ್ಲಿ ಹೆಚ್ಚಿನ ಗಮನ ಹರಿಸಿದ್ದೇವೆ. ತಾಲೂಕು ಮಟ್ಟದಲ್ಲಿ ಸದ್ಯ ತಾಲೂಕು ಆಡಳಿತ ಕೆಲಸ ಮಾಡ್ತಿದೆ.
ಬ್ಲಾಕ್ ಫಂಗಸ್‌ನ ಸಮಸ್ಯೆ ಹೆಚ್ಚಾಗಿರುವ ಕಾರಣ. ನಾನು ಕೆ.ಆರ್ ಆಸ್ಪತ್ರೆ ಭೇಟಿ ಕೊಟ್ಟು ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಇದಕ್ಕೆ ಬೇಕಾದ ಸೂಕ್ತ ಔಷಧಿ ಬಗ್ಗೆ ಸರ್ಕಾರಕ್ಕೆ ತಿಳಿಸುತ್ತೇನೆ. ಜೆಎಸ್ಎಸ್ ಆಸ್ಪತ್ರೆಯಿಂದಲು ಔಷಧಿಯ ಬೇಡಿಕೆ ಬಂದಿದೆ. ಹಾಗಾಗಿ ಸರ್ಕಾರಕ್ಕೆ ಈಗಲೇ ಪತ್ರ ಬರೆದು ಔಷಧಿಗಾಗಿ ಮನವಿ ಮಾಡುತ್ತೇವೆ. ಸದ್ಯ ಇರುವುದರಲ್ಲಿ ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿದ್ದೇವೆ. ಅವರಿಗೆ ಸಮಸ್ಯೆ ಆಗದಂತೆ ಎಚ್ಚರ ವಹಿಸಿದ್ದೇವೆ ಎಂದು ಮೈಸೂರಿನಲ್ಲಿ ವೈದ್ಯರ ಜೊತೆಗಿನ ಸಭೆ ಬಳಿಕ ಡಿಸಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
ಡಿಸಿ ಕುಟುಂಬದ ಸದಸ್ಯರಿಗೆ ಕರೋನಾ ಪಾಸಿಟಿವ್ ಬಂದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಮೂವರು ಮನೆಯಲ್ಲಿದ್ದಾರೆ, ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರು ಇದೀಗಾ ಸುಧಾರಣೆ ಕಂಡಿದ್ದಾರೆ. ನಾನು ಚೆಕ್ ಮಾಡಿಸಿದಾಗ ನೆಗೆಟಿವ್ ಬಂದಿದೆ. ನಾನು ನಿತ್ಯವೂ ಕೂಡ ಕರೋನಾ ತಪಾಸಣೆ ಮಾಡಿಸುತ್ತೇನೆ. ಆಂಟಿಜನ್ ಟೆಸ್ಟ್ ಮಾಡಿಸಿದ ಬಳಿಕವೇ ನಾನು ಸಹ ಕೆಲಸಕ್ಕೆ ಬರೋದು. ನಮ್ಮಿಂದಲು ಯಾರಿಗು ಸಮಸ್ಯೆ ಆಗಬಾರದು. ಹಾಗಾಗಿ ದಿನದ ತಪಾಸಣೆಯಲ್ಲಿ ನೆಗೆಟಿವ್ ಇದ್ದರೆ ಮಾತ್ರ ಬರುತ್ತೇನೆ ಎಂದರು.