ಮೈಸೂರಲ್ಲಿ ಸಾವಲ್ಲು ಮರೆಯಾಯ್ತು ಮಾನವೀಯತೆ: ಅಪ್ಪನ ಶವ ಬೇಡ, ಆದ್ರೆ ತಂದೆಯ ಹಣ ತಂದು ಕೊಡಿ ಎಂದ ಮಗ
1 min readಮೈಸೂರು: ಮೈಸೂರಲ್ಲಿ ಸಾವಲ್ಲು ಮರೆಯಾಯ್ತು ಮಾನವೀಯತೆ. ಅಪ್ಪನ ಶವ ಬೇಡ, ಆದ್ರೆ ತಂದೆಯ ಹಣ ತಂದು ಕೊಡಿ ಎಂದ ಮಗ.
ಹೌದು. ಕೊರೊನಾದಿಂದ ಸಾವಿಗೀಡಾದ ತಂದೆಯ ಶವ ಪಡೆಯಲು ಮಗ ನಿರಾಕರಿಸಿದ್ದಾನೆ. ಹೆಬ್ಬಾಳದ ಸೂರ್ಯ ಬೇಕರಿ ಬಳಿ ನಿವಾಸಿ ಕೊರೊನಾಗೆ ಬಲಿಯಾಗಿದ್ದು, ಫೋನ್ ಮಾಡಿ ಮಗನಿಗೆ ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ವಿಷಯ ಮುಟ್ಟಿಸಿದ್ದಾರೆ. ಈ ವೇಳೆ ನೀವೇ ಅಂತ್ಯಕ್ರಿಯೆ ಮುಗಿಸಿ, ಆದರೆ ತಂದೆಯ ಬಳಿ ಇರುವ 6 ಲಕ್ಷ ಹಣ, ದಾಖಲೆಗಳನ್ನ ತಂದು ಕೊಡಿ ಎಂದು ಮಗ ಹೇಳಿದ್ದಾನೆ.
ಒಟ್ಟಿನಲ್ಲಿ ಬಂಧು-ಬಳಗ ಇದ್ದರೂ ಕೊರೊನಾ ಸೋಂಕಿತ ವ್ಯಕ್ತಿ ಶವ ಅನಾಥವಾಗಿದೆ.