ಮೈಸೂರಿನಲ್ಲೂ ಸಂಚಾರ ಆರಂಭಿಸಿದ ಆಕ್ಸಿಜನ್ ಬಸ್
1 min readಮೈಸೂರು: ಮೈಸೂರಿನಲ್ಲೂ ಆಕ್ಸಿಜನ್ ಬಸ್ ಸಂಚಾರ ಆರಂಭಿಸಿದೆ. ಇಂದಿನಿಂದ ಎರಡು ಆಕ್ಸಿಜನ್ ಬಸ್ ಗಳು ಸಂಚಾರ ಶುರು ಮಾಡಿವೆ.
ಮೈಸೂರಿನ ಅಗ್ರವಾಲ್ ಸಮಾಜ 2 ಬಸ್ಗಳ ಕೊಡುಗೆ ನೀಡಿದೆ. ಗ್ರೀನ್ ವುಡ್ಸ್ ಇಂಟರ್ನ್ಯಾಷನಲ್ ಸ್ಕೂಲ್ ಸಹಯೋಗದೊಂದಿಗೆ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಿದೆ. ಮೊದಲ ಹಂತದಲ್ಲಿ ಎರಡು ಮಿನಿ ಬಸ್ ಗಳ ಕೊಡುಗೆಯಾಗಿ ಬಂದಿದೆ.
ಏಕ ಕಾಲದಲ್ಲಿ 14 ಜನರಿಗೆ ಆಕ್ಸಿಜನ್ ನೀಡುವ ವ್ಯವಸ್ಥೆ ಇದು ಹೊಂದಿದೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗಳ ಮುಂಭಾಗ ಆಕ್ಸಿಜನ್ ಬಸ್ ಕಾರ್ಯ ನಿರ್ವಹಿಸಲಿವೆ.
ಸಂಸದ ಪ್ರತಾಪ್ ಸಿಂಹ ಆಕ್ಸಿಜನ್ ಬಸ್ ಲೋಕಾರ್ಪಣೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಜೆಎಲ್ ಬಿ ಅಧ್ಯಕ್ಷ ಅಪ್ಪಣ್ಣ, ಮೇಯರ್ ರುಕ್ಮಿಣಿ ಮಾದೇಗೌಡ, ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಉಪಸ್ಥಿತರಿದ್ದರು.