ನಿಮ್ಮ ಮನೆಯಲ್ಲೇ ಮಾಡಿಕೊಳ್ಳಿ ಕೋವಿಡ್ ಟೆಸ್ಟ್ !
1 min readನವದೆಹಲಿ: ಈಗ ಮನೆಯಲ್ಲೇ ಕೋವಿಡ್ ಟೆಸ್ಟ್ ಮಾಡಿಕೊಳ್ಳಬಹುದು. ಇಂತಹದೊಂದು ಸಾಧನೆಯನ್ನ ಪುಣೆಯ ಮೈಲಾಬ್ ಸಂಸ್ಥೆ ಮಾಡಿದ್ದು ಕೇವಲ 15 ನಿಮಿಷದಲ್ಲಿ ನಿಮ್ಮ ಕೋವಿಡ್ ರಿಸಲ್ಟ್ ಗೊತ್ತಾಗಲಿದೆ.
ಪ್ರೆಗ್ನೆನ್ಸಿ ಟೆಸ್ಟ್ ಮಾಡುವ ರೀತಿಯಲ್ಲೇ ಇದರ ಮಾಹಿತಿ ಸಹ ಗೊತ್ತಾಗಲಿದ್ದು, ಮೂಗಿನ ಸ್ವಾಬ್ನ್ನ ಮೈಲಾಬ್ ಕಿಟ್ನ ಲಿಕ್ವಿಡ್ನಲ್ಲಿ ಹಾಕಬೇಕಿದ್ದು, ಆಪ್ ಮೂಲಕ ನಿಮಗೆ ಇದರ ಸಂಪೂರ್ಣ ಮಾಹಿತಿ ಗೊತ್ತಾಗಲಿದೆ.
ಸದ್ಯ ಇದಕ್ಕೆ ಐಸಿಎಂಆರ್ ಅನಮೋದನೆ ನೀಡಿದ್ದು ಶೀಘ್ರದಲ್ಲೇ ನಿಮಗೆ ಈ ಸೆಲ್ಫ್ಕೋವಿ ಟೆಸ್ಟ್ ಲಭ್ಯವಾಗಲಿದೆ. ಸದ್ಯಕ್ಕೆ 250ರೂ ದರ ನಿಗಧಿಯಾಗಿದೆ