ಮನೆಯಲ್ಲಿ ಪ್ರತ್ಯಕ್ಷವಾದ ನಾಗರಹಾವಿಗೆ ಪೂಜೆ ಸಲ್ಲಿಕೆ!
1 min readಮೈಸೂರು: ಮನೆಯಲ್ಲಿ ಪ್ರತ್ಯಕ್ಷವಾದ ನಾಗರಹಾವಿಗೆ ಅರಿಶಿಣ ಕುಂಕುಮ ಇಟ್ಟು ಗಂಧದ ಕಡ್ಡಿ ಬೆಳಗುವ ಮೂಲಕ ಮನೆ ಮಂದಿ ಪೂಜೆ ಸಲ್ಲಿಕೆ ಮಾಡಿದ್ದಾರೆ.
ಮೈಸೂರಿನ ಅಶೋಕರಸ್ತೆಯ ಅಭಿಷೇಕ್ ಎಂಬುವವರ ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡಿತ್ತು. ನಾಗರಹಾವು ಕಂಡೊಡನೆ ಆತಂಕಗೊಂಡ ಕುಟುಂಬಸ್ಥರು ಉರಗ ತಜ್ಞ ಸ್ನೇಕ್ ಶ್ಯಾಮ್ಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಸ್ನೇಕ್ ಶ್ಯಾಮ್ ನಾಗರಹಾವಿನ ರಕ್ಷಣೆ ಮಾಡಿದ್ದಾರೆ.
ಮನೆಯ ಕಿಟಕಿ ಬಳಿಯ ಹೂವಿನ ಪಾಟ್ ಬಳಿಯಿದ್ದ ನಾಗರಹಾವನ್ನ ಸ್ನೇಕ್ಶ್ಯಾಮ್ ರಕ್ಷಿಸಿ ಡಬ್ಬಿಯೊಳಗೆ ಹಾಕಿದ್ದರು. ಈ ವೇಳೆ ಮನೆಯವರಿಂದ ಹಾವಿಗೆ ಕುಡಿಸಲು ಹಾಲು ತಂದರು. ಈ ವೇಳೆ ಹಾವು ಹಾಲು ಕುಡಿಯಲ್ಲ ಎಂದ ಸ್ನೇಕ್ ಶ್ಯಾಮ್ ತಿಳಿ ಹೇಳಿದರು. ನಂತರ ಗಂಧದ ಕಡ್ಡಿ ಬೆಳಗಿ ಪೂಜೆ ಮಾಡಿದ್ದಾರೆ.
ಬಳಿಕ ಸ್ನೇಕ್ ಶ್ಯಾಮ್ ಸುರಕ್ಷಿತವಾಗಿ ಹಾವನ್ನ ಕಾಡಿಗೆ ಬಿಟ್ಟಿದ್ದಾರೆ.