ರಾಬರ್ಟ್, ಪೊಗರು ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ಕೊರೋನಾ ಸೋಂಕಿತರು
1 min readಮೈಸೂರು: ಮೈಸೂರಿನ ಕೋವಿಡ್ ಕೇರ್ ಸೆಂಟರ್ ನಲ್ಲಿ ಕೊರೋನಾ ಸೋಂಕಿತರು ರಾಬರ್ಟ್, ಪೊಗರು ಸಿನಿಮಾ ಹಾಡಿಗೆ ಸ್ಟೆಪ್ ಹಾಕಿ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.
ಮೈಸೂರು ತಾಲ್ಲೂಕಿನ ವರಕೊಡು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕೋವಿಡ್ ಆರೈಕೆ ಕೆಂದ್ರದಲ್ಲಿ ಕೊರೋನಾ ಸೋಂಕಿತರು ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ.
ಕೋವಿಡ್ ಸೋಂಕಿತರಲ್ಲಿ ಮಾನಸಿಕವಾಗಿ ಚೇತರಿಕೆ ತರಲು ಈ ನೃತ್ಯ ಮಾಡಿಸಲಾಗಿದೆ. ವೈದ್ಯ ಸಿಬ್ಬಂದಿಯೊಂದಿಗೆ ಕೋವಿಡ್ ಸೋಂಕಿತರು ಸ್ಟೆಪ್ ಹಾಕಿದ್ದಾರೆ.
ಆರೈಕೆ ಕೇಂದ್ರದ ಮುಂಭಾಗದಲ್ಲಿ ನೃತ್ಯ ಮಾಡಿ ವೈದ್ಯ ಸಮೂಹ ಸೋಂಕಿತರನ್ನ ರಂಜಿಸಿದೆ. ಉತ್ಸಾಹ ಭರಿತವಾಗಿ ವೈದ್ಯರೊಂದಿಗೆ ಸೋಂಕಿತರು ಸಹ ಹೆಜ್ಜೆ ಹಾಕಿದ್ದಾರೆ. ನಟ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ “ಕಣ್ಣು ಹೊಡಿಯಾಕ ಮೊನ್ನೆ ಕಲ್ತಿನಿ” ಹಾಡಿಗೆ & ಪೊಗರು ಹಾಡಿಗೆ ಕೋವಿಡ್ ಸೋಂಕಿತರು ಜಬರ್ದಸ್ಟ್ ಸ್ಟೆಪ್ ಹಾಕಿದ್ದಾರೆ.