ಸಾಮಾಜಿಕ ಅಂತರ ಮರೆತು ಬ್ಯಾಂಕ್ ಮುಂದೆ ಮುಗಿಬಿದ್ದ ರೈತರು
1 min readಮೈಸೂರು: ಸಣ್ಣ ಇಳುವರಿದಾರ ರೈತರಿಗೆ ಪ್ರಧಾನಮಂತ್ರಿ ತಲಾ ಎರಡು ಸಾವಿರ ಹಣ ರೈತರ ಖಾತೆಗೆ ಜಮಾ ಮಾಡುದ್ದಾರೆ ಅನ್ನುವ ಮಾಹಿತಿ ತಿಳಿದು ಎಚ್.ಡಿ.ಕೋಟೆ ಬ್ಯಾಂಕ್ ಗಳ ಮುಂದೆ ನೂರಾರು ರೈತರು ಸಾಮಾಜಿಕ ಅಂತರ ಕಾಯದೇ ನೂಕುನುಗ್ಗಲಿನಲ್ಲಿ ಅಸ್ತವ್ಯಸ್ಥವಾಗಿ ಉದ್ದುದ್ದನೆಯ ಸಾಲಿನಲ್ಲಿ ನಿಂತಿದ್ಸ ದೃಶ್ಯ ಕಂಡು ಬಂತು.
ಗುಂಪು ವೀಕ್ಷಿಸಿದ ಮಾದ್ಯಮದ ಪ್ರತಿನಿದಿಗಳು ಪೊಲೀಸರಿಗೆ ಮಾಹಿತಿ ನೀಡಿ ಸೋಂಕು ಹರಡುವಂತ ಸ್ಥಿತಿಯಲ್ಲಿರುವ ಜನಸಮೂಹ ನಿಯಂತ್ರಿಸುವಂತೆ ಸಲಹೆ ನೀಡಿದಾಗ ಸ್ಥಳಕ್ಕಾಸಿದ ಸರ್ಕಲ್ ಇನ್ಸ್ ಪೆಕ್ಟರ್ ರಾಜೇಂದ್ರ, ಪಿಎಸ್ ಐ ಅಶ್ವಿನಿ ಮತ್ರು ಸಿಬ್ಬಂಧಿಗಳು ಸ್ಥಳಕ್ಕೆ ದಾವಿಸಿ ಪರಿಸ್ಥಿತಿ ನಿಯಂತ್ರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಬ್ಯಾಂಕ್ ವ್ಯವಹಾರ ನಡೆಸುವಂತೆ ಎಚ್ಚರಿಸುವಲ್ಲಿ ಹರಸಾಹಸ ಪಡಬೇಕಾಯಿತು.