ಕೊರೋನ ನಿಯಂತ್ರಣಕ್ಕೆ ಕೋಟೆ ಮಾರಮ್ಮನ ಮೊರೆ ಹೋದ ಸಚಿವ ಎಸ್.ಟಿ.ಸೋಮಶೇಖರ್
1 min readಮೈಸೂರು: ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಕೊರೋನ ನಿಯಂತ್ರಣಕ್ಕೆ ಕೋಟೆ ಮಾರಮ್ಮನ ಮೊರೆ ಹೋಗಿದ್ದಾರೆ.
ದೇವಿಯ ಮೊರೆ ಹೋದ್ರೆ ಸಾಂಕ್ರಾಮಿಕ ರೋಗ ನಿವಾರಣೆಯಾಗುತ್ತೆ ಎಂಬ ಪ್ರತೀತಿ ಹಿನ್ನಲೆ ಮೈಸೂರು ಅರಮನೆ ಬಳಿ ಇರುವ ಐತಿಹಾಸಿಕ ಕೋಟೆ ಮಾರಮ್ಮ ದೇವಾಲಯಕ್ಕೆ ಸಚಿವರು ಭೇಟಿ ನೀಡಿದರು. ಚಾಮುಂಡೇಶ್ವರಿ ಪ್ರಧಾನ ಅರ್ಚಕ ಶಶಿಶೇಖರ ದಿಕ್ಷೀತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನಡೆಯಿತು. ಮೈಸೂರಿನ ಪೂರ್ವಜರು ಸಹ ಸಿಡುಬು, ಪ್ಲೇಗ್, ಕಾಲರದಂತ ಮಹಾಮಾರಿ ಅಪ್ಪಳಿಸಿದಾಗ ಕೋಟೆ ಮಾರಮ್ಮನ ಮೊರೆ ಹೋಗಿದ್ದರು.
ಈ ವೇಳೆ ಮೇಯರ್ ರುಕ್ಮಿಣಿ ಮಾದೇಗೌಡ, ಸಂಸದ ಪ್ರತಾಪ್ಸಿಂಹ ಸಚಿವರ ಜೊತೆಗಿದ್ದರು.