ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದ ನಾಲ್ವರು ನಾವಿಕರು ಅರ್ಹತೆ
1 min readನವದೆಹಲಿ: ಇದೇ ವರ್ಷ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್‌ಗೆ ಭಾರತದ ನಾಲ್ವರು ನಾವಿಕರು ಅರ್ಹತೆ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ವಿಷ್ಣು ಸರವಣನ್, ಗಣಪತಿ ಚೆಂಗಪ್ಪ ಮತ್ತು ವರುಣ್ ಠಕ್ಕರ್ ಓಮನ್‌ನಲ್ಲಿ ನಡೆದ ಏಷ್ಯನ್ ಕ್ವಾಲಿಫೈಯರ್ಸ್ ನಲ್ಲಿ ಒಲಿಂಪಿಕ್ಸ್ ಮಾನದಂಡಗಳನ್ನು ಪೂರೈಸಿ ಅರ್ಹತೆ ಗಳಿಸಿದ್ದಾರೆ.
ಇನ್ನು ಬುಧವಾರ (ಏಪ್ರಿಲ್ 7) ನಡೆದ ಮುಸ್ಸಾನಾ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಲೇಸರ್ ರೇಡಿಯಲ್ ಸ್ಪರ್ಧೆಯಲ್ಲಿ ಅಜೇಯ ಮುನ್ನಡೆ ಸಾಧಿಸುವ ಮೂಲಕ ಒಲಿಂಪಿಕ್ ಕೋಟಾಗೆ ನೇತ್ರಾ ಕುಮಾನನ್ ಸ್ಥಾನ ಗಳಿಸುವ ಮೂಲಕ ಇತಿಹಾಸ ಸೃಷ್ಟಿಸಿದರು. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ನಾವಿಕ ಎಂಬ ಹೆಗ್ಗಳಿಕೆಗೆ ಚೆನ್ನೈ ಮೂಲದ ನೇತ್ರಾ ಕುಮಾನನ್ ಪಾತ್ರರಾಗಿದ್ದಾರೆ.