ಮಲೆನಾಡು, ಕರಾವಳಿಯಲ್ಲಿ ಕಟ್ಟೆಚ್ಚರ: 3 ದಿನ ವಿಪರೀತ ಮಳೆ

1 min read

ಬೆಂಗಳೂರು: ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿಸೆಂಬರ್ 3ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುಜರಾತ್​​ನಲ್ಲಿ ಡಿ.1 ಮತ್ತು 2ರಂದು ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಕರ್ನಾಟಕದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ 3 ದಿನ ಭಾರೀ ಮಳೆಯಾಗಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಜಿಲ್ಲೆಯಲ್ಲಿ ಇಂದು ಮಳೆಯಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದ್ದು, ತಮಿಳುನಾಡಿನಲ್ಲಿ ಮಳೆ ಹೆಚ್ಚಾಗುತ್ತಿದೆ. ಕರ್ನಾಟಕದ ಮಲೆನಾಡು, ಕರಾವಳಿಯಲ್ಲಿ ಇಂದಿನಿಂದ ಡಿ. 2ರವರೆಗೆ ಮಳೆ ಮುಂದುವರೆಯಲಿದೆ.

ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಡಿಸೆಂಬರ್ 3ರವರೆಗೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳು ಭಯಂಕರ ಮಳೆಗೆ ತತ್ತರಿಸಿವೆ. ಆದರೆ ಮಳೆ ನಿಲ್ಲುವ ಲಕ್ಷಣಗಳಂತೂ ಕಾಣುತ್ತಿಲ್ಲ. ಗುಜರಾತ್​​ನಲ್ಲಿ ಡಿ.1 ಮತ್ತು 2ರಂದು ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತದ ಹವಾಮಾನ ಇಲಾಖೆ (IMD) ತಿಳಿಸಿದೆ.

ಉತ್ತರ ಮತ್ತು ದಕ್ಷಿಣ ಗುಜರಾತ್ ಕರಾವಳಿಯಲ್ಲಿ ಇಂದಿನಿಂದ ಡಿಸೆಂಬರ್ 2 ರವರೆಗೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ. ಅಕಾಲಿಕ ಮಳೆಯಿಂದಾಗಿ ಕಟಾವು ಹಾಗೂ ಬೆಳೆದು ನಿಂತಿರುವ ಬೆಳೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ರೈತರಿಗೆ ಸೂಚಿಸಲಾಗಿದೆ. ಇಂದು ದಕ್ಷಿಣ ಗುಜರಾತ್‌ನ ಎಲ್ಲಾ ಜಿಲ್ಲೆಗಳಲ್ಲಿ ಅಹಮದಾಬಾದ್, ಆನಂದ್, ಖೇಡಾ, ಪಂಚಮಹಲ್, ದಾಹೋದ್, ಸುರೇಂದ್ರನಗರ, ರಾಜ್‌ಕೋಟ್, ಪೋರಬಂದರ್, ಜುನಾಗಢ್, ಅಮ್ರೇಲಿಯಲ್ಲಿ ಗುಡುಗು, ಮಿಂಚು ಹಾಗೂ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.

ಇಂದು ಅಹಮದಾಬಾದ್, ಆನಂದ್​, ಖೇಡಾ, ಪಂಚಮಹಲ್​, ರಾಜ್​ಕೋಟ್​​ ಸೇರಿ ದಕ್ಷಿಣ ಗುಜರಾತ್​​ನ ಎಲ್ಲ ಜಿಲ್ಲೆಗಳಲ್ಲೂ ಗುಡುಗು-ಮಿಂಚು ಸಹಿತ ಮಧ್ಯಮ ಪ್ರಮಾಣದ ಮಳೆಯಾಗುವುದು. ಡಿಸೆಂಬರ್​ 1ರಂದು ಆನಂದ್, ಬರೂಚ್​, ನವ್​ಸರಿ, ವಲ್ಸಾದ್​ ಸೂರತ್​, ಡಂಗ್ಸ್​, ಅಮ್ರೇಲಿ, ಜುನಾಗಢ್​, ಗಿರ್​, ಸೋಮ್​ನಾಥ್​, ಬೋಟಾಡ್​ ಮತ್ತು ಭವನಗರ, ಡಾಹೋಡ್​, ಛೋಟಾಉದೇಪುರ್​, ಪಂಚಮಹಲ್​​ಗಳಲ್ಲಿ ಭರ್ಜರಿ ಮಳೆಯಾಗಲಿದೆ. ಹಾಗೇ, ಡಿಸೆಂಬರ್​ 2ರಂದು ಬನಸ್ಕಾಂತ, ಸಬರಕಾಂತ, ಅರಾವಳಿ, ಮಹಿಸಾಗರ, ಡಾಂಗ್ಸ್ ಮತ್ತು ತಾಪಿಯಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಚೆನ್ನೈ, ಚೆಂಗಲ್ಪಟ್ಟು, ಕಾಂಚೀಪುರಂ, ತಿರುವಳ್ಳೂರು, ವಿಲ್ಲುಪುರಂ, ಕಡಲೂರು, ನಾಗಪಟ್ಟಿಣಂ, ತಿರುವರೂರು, ತಂಜಾವೂರು, ಮೈಲಡುತುರೈ ಮತ್ತು ತಮಿಳುನಾಡಿನ ಕಡಲೂರು ಜಿಲ್ಲೆಗಳಲ್ಲಿ ಮತ್ತು ಕಾರೈಕಲ್ ಪ್ರದೇಶದಲ್ಲಿ

About Author

Leave a Reply

Your email address will not be published. Required fields are marked *