ಬರ್ತ್ ಡೇ ಪಾರ್ಟಿಗೆ ಬಂದು ಹೆಣವಾದ ಸ್ನೇಹಿತರು
1 min readತಿ.ನರಸೀಪುರ: ಬರ್ತ್ ಡೇ ಪಾರ್ಟಿಗೆ ಬಂದ ಸ್ನೇಹಿತರು ಹೆಣವಾಗಿದ್ದಾರೆ. ಬಾಳಿ ಬದುಕಬೇಕಿದ್ದ ಯುವಕರು ನೀರುಪಾಲಾಗಿದ್ದಾರೆ. ಮೈಸೂರು ಜಿಲ್ಲೆ ತಿ. ನರಸೀಪುರ ತಾಲ್ಲೂಕಿನ ತಡಿಮಾಲಂಗಿ ಗ್ರಾಮದ ಬಳಿ ಘಟನೆ ನಡೆದಿದೆ.
ಅಭಿಷೇಕ್ (21) ಅಂಕೆಶ್ (21) ಮೃತ ದುರ್ದವಿಗಳು. ಮೂಲತಃ ಯಳಂದೂರು ತಾಲ್ಲೂಕಿನ ಕಿನಕಹಳ್ಳಿ ಗ್ರಾಮದ ನಿವಾಸಿಗಳು. ಚಾಮರಾಜನಗರದ ಸರ್ಕಾರಿ ಇಂಜಿನಿಯರ್ ಕಾಲೇಜಿನಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು. ತಡಿಮಾಲಂಗಿ ಗ್ರಾಮಕ್ಕೆ ಸ್ನೇಹತನ ಹುಟ್ಟುಹಬ್ಬಕ್ಕೆ ಸ್ನೇಹಿತರು ಆಗಮಿಸಿದ್ದರು. ನದಿಯಲ್ಲಿ ಈಜಲು ಹೋಗಿ ಯುವಕರು ಪ್ರಾಣತೆತ್ತಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ವಿದ್ಯಾರ್ಥಿಗಳ ಮೃತದೇಹ ಹೊರತೆಗೆದಿದ್ದಾರೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದೆ.