ಈಜಲು ಹೋಗಿ ಇಬ್ಬರು ಯುವಕರು ನೀರು ಪಾಲು!
1 min read
ಹುಣಸೂರು : ಹನಗೋಡು ಹೋಬಳಿಯ ಹೆಗ್ಗಂದೂರು ಗ್ರಾಮದಲ್ಲಿ ಯುವಕರು ಲಕ್ಷ್ಮಣತೀರ್ಥ ನದಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.
ಹೆಗ್ಗಂದೂರು ಗ್ರಾಮದ ರಮೇಶ್ ರಾವ್ ರವರ ಮಗ ಶರತ್(17) ರಾವ್ ಮತ್ತು ಪುಟ್ಟೇಗೌಡರ ಮಗ ಶಿವಕುಮಾರ್(17) ಇಬ್ಬರು ಶುಕ್ರವಾರ ಮಧ್ಯಾಹ್ನ ಸುಮಾರು ಒಂದುಗಂಟೆ ಸಮಯದಲ್ಲಿ ಲಕ್ಷ್ಮಣ ತೀರ್ಥಹಳ್ಳಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರು ಯುವಕರು ಸಹ ಆನಗೋಡು ಪದವಿಪೂರ್ವ ಕಾಲೇಜಿನಲ್ಲಿ ಓದುತ್ತಿದ್ದು ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದು ನಾಳೆ ಪರೀಕ್ಷಾ ಫಲಿತಾಂಶಕ್ಕಾಗಿ ಕಾಯುತ್ತಿದ್ದರು ಎಂದು ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ವಿಷಯ ತಿಳಿದು ಘಟನಾ ಸ್ಥಳಕ್ಕೆ ಹುಣಸೂರು ಗ್ರಾಮಾಂತರ ಠಾಣೆಯ ಪೊಲೀಸ್ ಸಿಬ್ಬಂದಿಗಳು ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳು ಆಗಮಿಸಿ ಶಿವಕುಮಾರ್ ಮೃತದೇಹವನ್ನು ಮಾತ್ರ ಹೊರತೆಗೆಯಲು ಸಾಧ್ಯವಾಯಿತು ಕತ್ತಲಾಗಿದ್ದರಿಂದ ಶರತ್ ರಾವ್ ಮೃತದೇಹವನ್ನು ತೆಗೆಯುವ ಕಾರಣ ಕಾರ್ಯಾಚರಣೆಯನ್ನು ನಾಳೆ ಮಾಡಲಾಗುವುದು ಎಂದು ತಿಳಿಸಿದರು