ಗೊಂದಲ ಬೇಡ ಮೈಸೂರಿಗರೇ- ನಾಳೆ ವೀಕೆಂಡ್ ಕರ್ಫ್ಯೂ ಇದೆ
1 min readಮೈಸೂರು : ಸಾಕಷ್ಟು ಒತ್ತಾಯದ ನಡುವೆಯು ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರೆಯುತ್ತಿದ್ದು ಜಿಲ್ಲಾಢಳಿತ ಇದಕ್ಕೆ ಪೂರಕ ಕ್ರಮ ಕೈಗೊಂಡಿದೆ. ಶನಿವಾರ ಅಂದರೆ ನಾಳೆ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ಮೈಸೂರಿನ ವ್ಯಾಪಾರಸ್ಥರು ಹಾಗೂ ಸಂಘ ಸಂಸ್ಥೆಗಳು ಸಾಕಷ್ಟು ಒತ್ತಾಯ ಮಾಡಿದ್ದರು ಸಹ ಇದಕ್ಕೆ ಸಿಎಂ ಸಹಮತ ಸೂಚಿಸಿಲ್ಲ. ಇಂದು ಸಹ ಮೈಸೂರು ಭಾಗದ ರಾಜಕೀಯ ಮುಖಂಡರು ಮಾತುಕತೆ ನಡೆಸಿದರು ಇದಕ್ಕೆ ಸರಿಯಾದ ಉತ್ತರ ಸಿಗಲಿಲ್ಲ ಇದರಿಂದ ಮತ್ತೇ ಎರಡು ವಾರ ವೀಕೆಂಡ್ ಕರ್ಫ್ಯೂ ಮುಂದುವರೆದಿದ್ದು, ಡೈರಿ ಮತ್ತು ಹಾಲಿನ ಬೂತ್ಗಳಿಗೆ ಬೆಳಗ್ಗೆ 5 ರಿಂದ ರಾತ್ರಿ 8 ಗಂಟೆಯ ವರೆಗು ಅನುಮತಿ ನೀಡಿ ಮಾರ್ಪಾಡು ಮಾಡಲಾಗಿದೆ. ಆದರೆ ಎಂದಿನಂತೆ ಬೆಳಗ್ಗೆ 5 ರಿಂದ ಮಧ್ಯಾಹ್ನ 2 ಗಂಟೆವರೆಗು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.
ಆದರೆ ಸಂಘ ಸಂಸ್ಥೆಗಳು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಅಂಗಡಿ ಮಳಿಗೆ ತೆರೆಯಬೇಕಾ ಬೇಡವಾ ಎಂದು ಚರ್ಚೆಯಲ್ಲಿ ತೊಡಗಿದೆ. ಈ ನಡುವೆ ಪೊಲೀಸ್ ಇಲಾಖೆ ಕೂಡ ಕಟ್ಟು ನಿಟ್ಟಿನ ಆದೇಶ ಹೊರಡಿಸಿದ್ದು, ಅನಗತ್ಯ ಓಡಾಟ ಹಾಗೂ ಮಳಿಗೆ ತೆರೆಯದಂತೆ ಸೂಚನೆ ನೀಡಿದೆ. ಈ ಮೂಲಕ ನಾಳೆ ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂ ಚಾಲ್ತಿಯಲ್ಲಿದೆ.