ಸರ್ಕಾರದ ವೀಕೆಂಡ್ ಕರ್ಫ್ಯೂಗೆ ವಿಶ್ವನಾಥ್ ಕೆಂಡಾಮಂಡಲ!

1 min read

ಲೋಕಸೇವಾ ಆಯೋಗದ ಪಟ್ಟಿ ರದ್ದು ಮಾಡಲು ನ್ಯಾಯಾಲಯದ ತೀರ್ಪು ವಿಚಾರ. ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಪಟ್ಟಿಯನ್ನು ವಜಾ ಮಾಡಿದೆ. ಹೈಕೋರ್ಟ್ ತೀರ್ಪನ್ನು ಸುಪ್ರಿಂ‌ಕೋರ್ಟ್ ಎತ್ತಿ ಹಿಡಿದಿದೆ. ಸುಪ್ರಿಂ ಕೋರ್ಟ್ ಮೇಲ್ಮನವಿಯನ್ನು ಸಹಾ ತಳ್ಳಿ ಹಾಕಲಾಗಿದ್ದು ಎಲ್ಲಾ ಕೋರ್ಟ್‌ಗಳು ಒಂದೇ ರೀತಿ ತೀರ್ಮಾನಗಳನ್ನು ನೀಡಿವೆ.

ಭ್ರಷ್ಟಾಚಾರ ಸ್ವಜನ ಪಕ್ಷಪಾತ ಜಾತಿ ದುಡ್ಡಿನಿಂದಲೇ ಆಯ್ಕೆಯಾಗಿದೆ. ಇವರನ್ನು ತೆಗೆದುಕೊಂಡು ಹೇಗೆ ಅಧಿಕಾರ ಮಾಡಲು ಸಾಧ್ಯ ?‌ಎಂದರು. ಇನ್ನು ಆಯ್ಕೆ ಪಟ್ಟಿಯಲ್ಲಿದ್ದವರು ಅನ್ಯಾಯ ಆಗಿದೆ ಅನ್ನೋ ವಿಚಾರವಾಗಿ ಮೇಲ್ಮನವಿಯನ್ನು ಹೆಚ್ ಡಿ ದೇವೇಗೌಡರಿಗೆ ಸಲ್ಲಿಸಿದ್ದಾರೆ. ಹೆಚ್ ಡಿ ದೇವೇಗೌಡರು ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಮೇಲ್ಮನವಿ ರಾಜಕಾರಣಿಗೆ ಸಲ್ಲಿಸೋದು ಎಷ್ಟು ಸರಿ ? ಎಂದು ಎಂಎಲ್ಸಿ ಎಚ್ ವಿಶ್ವನಾಥ್ ಆಕ್ರೋಶ ಹೊರಹಾಕಿದ್ದಾರೆ‌.

ಹೈಕೋರ್ಟ್ ಸುಪ್ರೀಂಕೋರ್ಟ್ ಬಗ್ಗೆ ಗೌರವ ಇಲ್ಲವಾ ? ಲಕ್ಷಾಂತರ ಜನ ಪರೀಕ್ಷೆ ಬರೆದಿದ್ದಾರೆ ಅವರಿಗೆ ಅನ್ಯಾಯ ಆಗಿಲ್ಲವಾ ? ಈ 365 ಜನ ನಿಮ್ಮ ಶಿಫಾರಸ್ಸಿನಿಂದ ಆದವರು. ಇದು ಅಸಂವಿಧಾನಿಕವಾದ ಆಯ್ಕೆಯಾಗಿತ್ತು. ಇವರ ಪರವಾಗಿ ಸಿಎಂ ನಿಲ್ಲಬಾರದು. ಸಿರಿಗರೆ ಮಹಾಸ್ವಾಮಿಗಳಿಗೂ ಸಹಾ ಈ ಬಗ್ಗೆ ಮೇಲ್ಮನವಿ. ಸಧರ್ಮ ಪೀಠ ಸುಪ್ರೀಂ ಕೋರ್ಟ್‌ಗಿಂತ ದೊಡ್ಡರು ಅಂತಾರೆ. ದೇಶದ ಕಾನೂನನ್ನು ರಾಜಕಾರಣಿಗಳು ಸ್ವಾಮೀಜಿಗಳು ತೆಗೆದುಕೊಳ್ಳುತ್ತಿದ್ದಾರೆ. ಈ ರೀತಿ ಆದರೆ ದೇಶದ ಗತಿ ಏನು ?


ಸಿದ್ದರಾಮಯ್ಯ ಸಹ ಏನು ಮಾಡಲಿಲ್ಲ. ಭ್ರಷ್ಟ ಶ್ಯಾಂಭಟ್‌ನನ್ನು ಕೆಪಿಎಸ್‌ಸಿಗೆ ಚೇರ್‌ಮ್ಯಾನ್ ಮಾಡಿದ್ರಿ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಇಲ್ಲ. ನನ್ನ ಜಾತಿಯವನು ನಮ್ಮ ಮನೆ ಮಗಳನ್ನು ಮದುವೆ ಮಾಡಲು ಈ ಆಯ್ಕೆ. ರಾಜಕಾರಣಿಗಳಿಂದ ಮನೆ ಮಗಳ‌ ಮದುವೆಗೆಗಾಗಿ ಆಯ್ಕೆ ಎಂದು ಮೈಸೂರಿನಲ್ಲಿ ಎಂ.ಎಲ್‌ಸಿ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ಸಂಪುಟ ಬದಲಾವಣೆ ಸುಳಿವು!

ಇನ್ನು ರಾಜ್ಯದಲ್ಲಿ ಸಚಿವ ಸಂಪುಟ ಬದಲಾವಣೆ ವಿಚಾರವಾಗಿ ಮಾತನಾಡಿದ ವಿಶ್ವನಾಥ್, ಸುಧಾರಣೆಗಾಗಿ ಬದಲಾವಣೆ ಅಗತ್ಯವಿದೆ. ಆಡಳಿತದಲ್ಲಿ ಸುಧಾರಣೆಯಾಗಬೇಕಾದರೆ ಬದಲಾವಣೆ ಮುಖ್ಯ. ಈ‌ ನಿಟ್ಟಿನಲ್ಲಿ ಸಿಎಂ ನಿರ್ಧಾರ ಮಾಡಲಿದ್ದಾರೆ ಎಂದು ಸಚಿವ ಸಂಪುಟದ ಸರ್ಜರಿಗೆ ಬಗ್ಗೆ ವಿಶ್ವನಾಥ್ ಸುಳಿವು ನೀಡಿದ್ದರು.

ಯಾರಾದರು ಹುಚ್ಚ ಈ ರೀತಿ ಆದೇಶ ಕೊಡ್ತಾರಾ?

ನೈಟ್ ಕರ್ಪ್ಯೂ ವೀಕೆಂಡ್ ಕರ್ಪ್ಯೂ ಯಾರಿಗೆ.? ಎಲ್ಲಾ ಅಂಗಡಿಗಳು ತೆರೆದು ಜನ ಬರಬಾರದು ಅಂತಾರೆ. ಯಾರಾದರೂ ಹುಚ್ಚ ಈ ರೀತಿ ಆದೇಶ ಕೊಡುತ್ತಾರಾ? ಎಂದು ಎಂ.ಎಲ್.ಸಿ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಜನರು ಮಾತ್ರ ಆಚೆ ಬರಬಾರದು ಅಂದರೆ ಹೇಗೆ.? ನನಗೆ ಏನು ಅರ್ಥ ಆಗ್ತಾ ಇಲ್ಲ. ನಿಮಗೆ ಹೇಳುವವರು ಕೇಳುವವರು ಇಲ್ಲವಾ ? ಜನರನ್ನು ಗಾಬರಿ ಮಾಡಬೇಡಿ. ಮೂರನೇ ಅಲೆ ಮೊದಲ ರೀತಿ ಇಲ್ಲ. ಇದು ಆರೋಗ್ಯದ ವಿಚಾರ. ಕೋವಿಡ್ ಹೆಸರಲ್ಲಿ ಕೆಲವರು ದುಡ್ಡು ಮಾಡಿದ್ದು ಸಾಕು. ಕೆಲವರು ಕೋವಿಡ್ ಹೆಸರಲ್ಲಿ ಹಣ ಲೂಟಿ ಮಾಡಿದ್ದಾರೆ. ವೈದ್ಯರು ಸಾಲ ಮಾಡಿದ್ದನ್ನು ಎಲ್ಲವನ್ನೂ ತೀರಿಸಿಕೊಂಡಿದ್ದಾರೆ. ಖಾಸಗಿ ಆಸ್ಪತ್ರೆ ಉಳ್ಳವರಿಗೆ ಅನುಕೂಲ ಮಾಡಲು ಸರ್ಕಾರ ಹೊರಟಿದೆ. ಮಂತ್ರಿನೇ ತಜ್ಞರು, ಡಾ ಸುಧಾಕರ್ ಹಲ್ಲಿನ ವೈದ್ಯರು. ಜನರಿಗಿಂತ ತಜ್ಞರು ಯಾರು ಇಲ್ಲ. ಸರ್ಕಾರ ಕೆಲವು ನಿಬಂಧನೆಗಳನ್ನು ಹಾಕಲಿ. ಆದರೆ ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ನೈಟ್ ಕರ್ಪ್ಯೂ ಬೇಡ. ಆಯಾ ಜಿಲ್ಲೆಯ ಪರಿಸ್ಥಿತಿಗೆ ತಕ್ಕಂತೆ ಡಿಸಿಗೆ ನಿರ್ಧಾರ ಮಾಡಲು ಬಿಡಿ ಎಂದಿದ್ದಾರೆ.

About Author

Leave a Reply

Your email address will not be published. Required fields are marked *