ಜೂನ್1ರಿಂದ 7ರ ವರೆಗೆ ವಸ್ತು ಪ್ರದರ್ಶನದ ಆವರಣ & ಲಲಿತ್ ಮಹಲ್ ಮೈದಾನದಲ್ಲಿರುವ ತರಕಾರಿ ಮಾರುಕಟ್ಟೆ ಬಂದ್
1 min readಮೈಸೂರು: ನಾಳೆಯಿಂದ ಜೂ.1ರಿಂದ ಜೂ.7ರ ವರೆಗು ಎಂಜಿ ರಸ್ತೆ ವಸ್ತು ಪ್ರದರ್ಶನದ ಆವರಣದ ತರಕಾರಿ ಮಾರುಕಟ್ಟೆ- ಲಲಿತ್ ಮಹಲ್ ಮೈದಾನದಲ್ಲಿರುವ ತರಕಾರಿ ಮಾರುಕಟ್ಟೆ ಸಂಪೂರ್ಣ ವ್ಯಾಪಾರ ವಹಿವಾಟು ಬಂದ್ ಮಾಡಿ ಸ್ಥಗಿತಗೊಳಿಸುವಂತೆ ಮೈಸೂರು ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆಯುಕ್ತರು ರೈತರು ಹಾಗೂ ಸಾರ್ವಜನಿಕರ ಹಿತ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಮಾರುಕಟ್ಟೆಯಲ್ಲಿ ನಿತ್ಯವೂ ಜನದಟ್ಟಣೆ ಹೆಚ್ಚಾದ ಹಿನ್ನಲೆಯಲ್ಲಿ ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್ ಅವರು ಈ ಆದೇಶ ಹೊರಡಿಸಿದ್ದಾರೆ.