‘ವಾಮನ’ ಮೂಲಕ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಅಪರೂಪದ ‘ಚೇತನ’… ಇದೇ 15ಕ್ಕೆ ವಾಮನ ಟೀಸರ್ ಅನಾವರಣ
1 min readಸಿನಿಮಾ: ಬಜಾರ್, ಬೈ ಟು ಲವ್ ಸಿನಿಮಾ ಖ್ಯಾತಿಯ ಧನ್ವೀರ್ ಗೌಡ ನಟಿಸ್ತಿರುವ ಬಹು ನಿರೀಕ್ಷಿತ ಸಿನಿಮಾ ವಾಮನ ನಾನಾ ವಿಚಾರಗಳಿಂದ ಚಿತ್ರಪ್ರೇಮಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ನಿರ್ದೇಶಕ ಶಂಕರ್ ರಾಮನ್, ಇಡೀ ತಂಡದ ಶ್ರದ್ಧೆ ಹಾಗೂ ಪರಿಶ್ರಮದಿಂದ ರೂಪಗೊಳ್ಳುತ್ತಿರುವ ಈ ಸಿನಿಮಾವನ್ನು ಅತೀವ ಆಸಕ್ತಿ ಹಾಗೂ ಕಲಾ ಪ್ರೇಮದಿಂದ ಚೇತನ್ ಕುಮಾರ್ ನಿರ್ಮಾಣ ಮಾಡಿದ್ದಾರೆ. ಹತ್ತಾರು ವರ್ಷಗಳಿಂದ ಬಚ್ಚಿಟ್ಟುಕೊಂಡಿದ್ದ ಸಿನಿಮಾ ಕನಸನ್ನು ವಾಮನ ಮೂಲಕ ನನಸು ಮಾಡಿಕೊಳ್ಳುತ್ತಿದ್ದಾರೆ.
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಖ್ಯಾತಿ ಗಳಿಸಿರುವ ಚೇತನ್ ಕುಮಾರ್ ಸಿನಿಮಾ ಮೇಲಿನ ವ್ಯಾಮೋಹ ಹೆಚ್ಚಿಸಿಕೊಂಡೇ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಮೂಲತಃ ದೇವನಹಳ್ಳಿಯವರಾದ ಇವರು, ಆರಂಭದಿಂದಲೂ ಸಿನಿಮಾ ಪ್ರೇಮಿ. ಚಿತ್ರದ ನಾಯಕ ಧನ್ವೀರ್ ಆತ್ಮೀಯ ಗೆಳೆಯ. ಈ ಎರಡು ನಂಟು ಇವರನ್ನು ಸಿನಿಮಾ ಮಾಡುವ ಉತ್ಸುಕತೆ ಹೆಚ್ಚಿಸಿದೆ. ಹೀಗಾಗಿ ನಿರ್ದೇಶಕರು ಹೇಳಿದ ಕಥೆಗೆ ಫಿದಾ ಅದ್ಧೂರಿಯಾಗಿ ವಾಮನ ಸಿನಿಮಾ ನಿರ್ಮಾಣ ಮಾಡಿದ್ದಾರೆ. ತಮ್ಮದೇ ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ ಟೈನ್ಮೆಂಟ್ ನಡಿ ಬ್ಯಾನರ್ ನಡಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ವಾಮನ ತಮ್ಮ ಡ್ರೀಮ್ ಪ್ರಾಜೆಕ್ಟ್ ಎನ್ನುವ ನಿರ್ಮಾಪಕ ಚೇತನ್ ಕುಮಾರ್, ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಸಿನಿಮಾ ನಿರ್ಮಾಣ ಮಾಡುವ ಕನಸು ಕಟ್ಟಿಕೊಂಡಿದ್ದಾರೆ. ಅದರ ಮುಂದುವರೆದ ಭಾಗವಾಗಿ ಈಗಾಗಲೇ ನಾಲ್ಕೈದು ಕಥೆ ಕೇಳಿದ್ದಾರಂತೆ.
15ಕ್ಕೆ ವಾಮನ ಟೀಸರ್
ಲವ್ ಸ್ಟೋರಿ ಜೊತೆಗೆ ಔಟ್ ಅಂಡ್ ಔಟ್ ಆಕ್ಷನ್ ಕಮರ್ಷಿಯಲ್ ಸಿನಿಮಾವಾಗಿರುವ ವಾಮನ ಟೀಸರ್ ಇದೇ 15ಕ್ಕೆ ರಿಲೀಸ್ ಆಗ್ತಿದೆ. ನಿರ್ಮಾಪಕ ಚೇತನ್ ಕುಮಾರ್ ಹುಟ್ಟುಹಬ್ಬ ಹಾಗೂ ಸ್ವಾತಂತ್ರ್ಯದ ವಿಶೇಷ ಉಡುಗೊರೆಯಾಗಿ ವಾಮನ ಟೀಸರ್ ಚಿತ್ರರಸಿಕರ ಮಡಿಲು ಸೇರಲಿದೆ. ಕನ್ನಡ, ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿರುವ ಶಂಕರ್ ರಾಮನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಧ್ವನೀರ್ ಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ಬಣ್ಣ ಹಚ್ಚಿದ್ದಾರೆ. ಈಗಾಗಲೇ 70 ದಿನದ ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಶೀರ್ಘದಲ್ಲಿಯೇ ಬಾಕಿ ಉಳಿದ ಚಿತ್ರೀಕರಣ ಮುಗಿಸಲಿದೆ.