12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನೇಷನ್!

1 min read

ಇಂದು ಕೃಷ್ಣರಾಜ ಕ್ಷೇತ್ರದ ಎಸ್.ಎಮ್. ಟಿ ಆಸ್ಪತ್ರೆಯಲ್ಲಿ 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನೇಷನ್ ಡ್ರೈವ್ ಉದ್ಘಾಟನೆಯನ್ನ ಶಾಸಕರಾದ ಎಸ್.ಎ.ರಾಮದಾಸ್ ಅವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ಇಡೀ ದೇಶದಲ್ಲಿ ಇಂದು 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ವ್ಯಾಕ್ಸಿನೇಷನ್ ಅನ್ನು ನೀಡಲು ಪ್ರಾರಂಭವಾಗಿದೆ. ಲಸಿಕೆ ವಿಷಯದಲ್ಲಿ ಭಾರತ ಮುಂದಿದೆ, ಸುಮಾರು 180 ಕೋಟಿ ಲಸಿಕೆಯನ್ನು ನಮ್ಮ ದೇಶದಲ್ಲಿ ಇದುವರೆಗೆ ನೀಡಲಾಗಿದೆ. ನಮ್ಮ ಜಿಲ್ಲೆಯಲ್ಲಿರುವ 1.37 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ಕೆ ಇಂದು ಚಾಲನೆ ಸಿಕ್ಕಿದೆ. ಚೈನಾದಲ್ಲಿ ಮತ್ತೊಂದು ಅಲೆ ಪ್ರಾರಂಭವಾಗಿದೆ ಎಂಬ ಸುದ್ದಿ ನಮಗೆ ತಿಳಿಯುತ್ತಿದೆ ಇದನ್ನರಿತ ಪ್ರಧಾನಿ ಮೋದಿಯವರು ಇಂದು ಮಕ್ಕಳಿಗೆ ಲಸಿಕೆ ನೀಡಲು ನಿರ್ಧರಿಸಿದರು. ಈ ಬಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಮಕ್ಕಳಿಗೆ ಹಲವಾರು ಯೋಜನೆಗಳನ್ನು ನೀಡಿದ್ದಾರೆ, 10 ನೇ ತರಗತಿಯ ಮಕ್ಕಳಿಗೆ ಒಂದು ಬಜೆಟ್ ಬಗ್ಗೆ ವಿಚಾರ ಸಂಕೀರ್ಣ ಏರ್ಪಡಿಸಬೇಕು ಎಂದು ಯೋಚನೆ ಇದೆ. ರಾಜ್ಯ ಸರ್ಕಾರ ಈ ಬಾರಿ ವಿಶೇಷವಾಗಿ ಚೈಲ್ಡ್ ಬಜೆಟ್ ಅನ್ನು ಘೋಷಣೆ ಮಾಡಿದೆ ಇದರಲ್ಲಿ ಸುಮಾರು 34 ಸಾವಿರ ಕೋಟಿ ರೂ ಹಣವನ್ನು ಇಟ್ಟಿದ್ದಾರೆ. ಮಕ್ಕಳ ಆರೋಗ್ಯದಿಂದ ಶಿಕ್ಷಣದ ವರೆಗೂ ಸಹ ಬಜೆಟ್ ನಲ್ಲಿ ಒತ್ತು ನೀಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಹ ಈ ಬಾರಿ ಬಜೆಟ್ ಅನ್ನು ನೀಡುವಾಗ UNO ದಲ್ಲಿರುವ 17 ಸಸ್ಟ್ರೈನೆಬಲ್ ಡೆವಲಪ್ಮೆಂಟ್ ಗೋಲ್ ಆಧಾರದ ಮೇಲೆ ಬಜೆಟ್ ಅನ್ನು ಘೋಷಣೆ ಮಾಡಿದ್ದಾರೆ. ರಾಜ್ಯ ಸರ್ಕಾರದಲ್ಲೂ ಸಹ ಚೈಲ್ಡ್ ಬಜೆಟ್ ಜೊತೆಗೆ ಜೆOಡರ್ ಬಜೆಟ್ ಕೂಡಾ ಘೋಷಣೆ ಮಾಡಿದ್ದಾರೆ.
ನಮ್ಮಲ್ಲಿ ಮಕ್ಕಳಿಗೆ ಯಾರಿಗಾದರೂ ತುಂಬಾ ಕಿವಿಯ ಸಮಸ್ಯೆ ಇದ್ದರೆ ಅವರಿಗೆ ಉಚಿತವಾಗಿ ಕಾಕ್ಲಿಯಾರ್ ಇಂಪ್ಲಾಂಟ್ ಅನ್ನು ಮಾಡುವ ಕೆಲಸವನ್ನು ಸರ್ಕಾರ ಈ ಬಾರಿ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನಕ್ಕೆ ಜನೌಷದವನ್ನು ದೇಶಕ್ಕೆ ನೀಡಿದರು.

ನಾನು ಮೊದಲ ಬಾರಿ ಮಂತ್ರಿಯಾಗಿದ್ದಾಗ ದೇಶದಲ್ಲಿ ಮೊದಲ ಬಾರಿಗೆ 10 ಜನರಿಕ್ ಡ್ರಗ್ ಹೌಸ್ ಅನ್ನು ಕರ್ನಾಟಕದಲ್ಲಿ ಪ್ರಾರಂಭ ಮಾಡಿದ್ದೆವು. ಕಳೆದ ವಾರ ಜನೌಷದದ ದಿನದಂದು ಭಾರತದ 5 ಕೇಂದ್ರಗಳನ್ನು ಆಯ್ಕೆ ಮಾಡಿ ಅಲ್ಲಿನ ಫಲಾನುಭವಿಗಳ ಬಳಿ ಮಾತನಾಡಿದ್ದರು, ಅದರಲ್ಲಿ ಮೈಸೂರು ಕೂಡಾ ಒಂದು ಎಂದು ಹೇಳಲು ಹೆಮ್ಮೆ ಅನಿಸುತ್ತಿದೆ. ಜೊತೆಗೆ ಪ್ರಧಾನಿಗಳು ಒಂದು ಸಂದೇಶವನ್ನು ನೀಡಿದರು ಸೋಶಿಯಲ್ ಮೀಡಿಯಾ ಮೂಲಕ ಜನೌಷದದ ಬಗ್ಗೆ ಅರಿವನ್ನು ಮೂಡಿಸಲು ಕರೆ ಕೊಟ್ಟರು. ಇದೇ ಶುಕ್ರವಾರದಂದು ಬೀದಿ ಬದಿ ವ್ಯಾಪಾರ ಮಾಡುವ ಮಹಿಳೆಯರು, ಹಾಗೂ ವಿವಿಧ ಮಹಿಳಾ ಸಂಘ ದಲ್ಲಿರುವ ಮಹಿಳೆಯರಿಗೆ ವಿಶೇಷ ಆರೋಗ್ಯ ಜಾಗೃತಿ ಕಾರ್ಯಕ್ರಮವನ್ನು ಪ್ರಾರಂಭ ಮಾಡುವವರಿದ್ದೇವೆ ಎಂದರು.

ಸದರಿ ಕಾರ್ಯಕ್ರಮದಲ್ಲಿ ಮೂಡಾ ಅಧ್ಯಕ್ಷರಾದ ಹೆಚ್ ವಿ ರಾಜೀವ್ ಅವರು, ಜಿಲ್ಲಾ ಪಂಚಾಯ್ತ್ ಮುಖ್ಯ ಕಾರ್ಯನಿರ್ವಹಣ ಅಧಿಕಾರಿ ಶ್ರೀಮತಿ ಪೂರ್ಣಿಮಾ, ಡಿ ಹೆಚ್ ಓ ಪ್ರಸಾದ್, ಡಿ ಡಿ ಪಿ ಐ ರಾಮರಾಜೇ ಅರಸ್, ಮೈಸೂರು ದಕ್ಷಿಣ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಾರಾಧ್ಯ, ಸ್ಥಳೀಯ ನಗರಪಾಲಿಕಾ ಸದಸ್ಯರಾದ ಶ್ರೀಮತಿ ಪಲ್ಲವಿ ಬೇಗಂ, ಆಸತ್ರೆಯ ಕಮಿಟಿ ಸದಸ್ಯರಾದ ಸಂತೋಷ್, ಪಿ.ಟಿ ಕೃಷ್ಣ, ಗಿರೀಶ್ ಇನ್ನಳಿದ ಪ್ರಮುಖರು ಹಾಜರಿದ್ದರು

About Author

Leave a Reply

Your email address will not be published. Required fields are marked *