ರಾಜ್ಯದಲ್ಲಿ ಲಸಿಕೆ ಕೊರತೆ ವಿಚಾರ: ರಾಜ್ಯ ಸರ್ಕಾರದ ನಿರ್ವಹಣೆ ಬಗ್ಗೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಪ್ರಹ್ಲಾದ ಜೋಶಿ
1 min readಮೈಸೂರು: ರಾಜ್ಯದಲ್ಲಿ ಲಸಿಕೆ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ನಿರ್ವಹಣೆ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ 1 ವಾರ ಮೊದಲೇ ಲಸಿಕೆ ಎಷ್ಟು ಕೊಡುತ್ತೇವೆಂದು ಹೇಳುತ್ತೆ. ಈ ಬಗ್ಗೆ ಮಾಹಿತಿ ರಾಜ್ಯ ಸರ್ಕಾರಕ್ಕೆ ನೀಡುತ್ತೆ. ಅದಕ್ಕೆ ತಕ್ಕಂತೆ ವಿತರಣೆ ವ್ಯವಸ್ಥೆ ಸರ್ಕಾರ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರಗಳು ನಿರ್ವಹಣೆ ವಿಚಾರದಲ್ಲಿ ಇನ್ನು ವ್ಯವಸ್ಥೆಗಳನ್ನು ಸರಿಯಾಗಿ ಮಾಡಿಕೊಳ್ಳಬೇಕು. ಜನಸಂಖ್ಯೆಗನುಗುಣವಾಗಿ ಡಿಸೆಂಬರ್ ತಿಂಗಳ ವರೆಗೂ ಲಸಿಕೆ ನೀಡಲಾಗುತ್ತದೆ. ಎಲ್ಲ ಸರ್ಕಾರಗಳಿಗೂ ನಾನು ಮನವಿ ಮಾಡುತ್ತೇನೆ ಅಂತ ಸುತ್ತೂರು ಶಾಖಾಮಠದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ದುರಂಹಕಾರ ಹಾಗೂ ಮಾಹಿತಿ ಕೊರತೆಗೆ ಲಸಿಕೆ: ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿಗೆ ಮಾಹಿತಿ ಕೊರತೆ ಇದೆ. ಅಮೆರಿಕಾದ ಜನಸಂಖ್ಯೆಯಷ್ಟೇ ಲಸಿಕೆ ನೀಡಿದ್ದೇವೆ. ಎರಡು ಇಂಗ್ಲೆಂಡ್ ಜನಸಂಖ್ಯೆಯಷ್ಟು ಲಸಿಕೆ ನೀಡಲಾಗಿದೆ. 125 ಕೋಟಿ ಜನರಿಗೂ ಒಟ್ಟಿಗೆ ಲಸಿಕೆ ನೀಡಲು ಸಾಧ್ಯವಿಲ್ಲ. ಹಂತ ಹಂತವಾಗಿ ಲಸಿಕೆ ನೀಡಲಾಗುವುದು. ಒಂದು ತಿಂಗಳ ಸಮಯ ನೀಡಿ ರಾಹುಲ್ ಮಾತನಾಡಬಹುದಿತ್ತು. ಅವರ ದುರಂಹಂಕಾರದ ಹೇಳಿಕೆಗೆ ಲಸಿಕೆ ಕೊಡಲು ಸಾಧ್ಯವಿಲ್ಲ.
ರಾಜ್ಯದಲ್ಲಿ ನೋ ಲಸಿಕೆ ಬೋರ್ಡ್ ವಿಚಾರ: ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಆರೋಗ್ಯ ಸಚಿವ ಕೆ ಸುಧಾಕರ್ ಜೊತೆ ಮಾತನಾಡುತ್ತೇನೆ ಅಂತ ಮೈಸೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.