ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತನ ಮೇಲೆ ಕಾಡಾನೆ ದಾಳಿ: ಸಾವು
1 min readಮೈಸೂರು: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತನ ಮೇಲೆ ಕಾಡಾನೆ ದಾಳಿ ನಡೆಸಿದೆ. ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ರೈತ ಮೃತಪಟ್ಟಿದ್ದಾರೆ.
ಎಚ್.ಡಿ.ಕೋಟೆ ತಾಲೋಕಿನ ಜಿ.ಎಂ.ಹಳ್ಳಿ ಹೊರವಲಯದಲ್ಲಿ ಘಟನೆ ನಡೆದಿದೆ. ಜಿ.ಎಂ.ಹಳ್ಳಿ ಗ್ರಾಮದ ಮುನಿಯ ನಾಯಕ್ (70) ಮೃತ ದುರ್ದೈವಿ. ಜಮೀನಿನಲ್ಲಿ ಉಳುಮೆ ಮಾಡಿ ರಾಸುಗಳಿಗೆ ನೀರು ಕುಡಿಸುವಾಗ ದಾಳಿ ನಡೆಸಿದ ಸಲಗ ದಾಳಿ ಮಾಡಿದೆ. ಚೀರಾಟ ಆಲಿಸಿ ಸಹಾಯಕ್ಕೆ ಬಂದ ನೆರಯ ರೈತನ ಕಂಡು ಆನೆ ಓಡಿದೆ.
ಕುಟುಂಬಸ್ಥರಿಗೆ ಮಾಹಿತಿ ನೀಡಿ ಗಾಯಾಳು ಆಸ್ಪತ್ರೆಗೆ ರವಾನೆ ಮಾಡಲಾಗುತಿತ್ತು. ಆದರೆ ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆಗೆ ಆಗಮಿಸುತ್ತಿದ್ದಂತೆಯೇ ರೈತ ಮೃತಪಟ್ಟಿದ್ದಾರೆ. ನಾಗರಹೊಳೆ ರಾಷ್ಟ್ರೀಯ ಅರಣ್ಯದ ಮೇಟಿಕುಪ್ಪೆಯಿಂದ ಈ ಸಲಗ ಹೊರ ಬಂದಿದೆ.