ಮೈಸೂರಿನಲ್ಲಿ ಈ ತಿಂಗಳಲ್ಲೇ ದಸರಾ ಮೊದಲ ಸಭೆ!
1 min readಮೈಸೂರು : ವಿಶ್ವವಿಖ್ಯಾತ ನಾಡಹಬ್ಬದ ದಸರಾಗೆ ಮೊದಲ ತಯಾರಿ ಆಗಬೇಕಿದ್ದು ಆ ತಯಾರಿ ಈ ತಿಂಗಳಲ್ಲೇ ಆಗಲಿದೆ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. ಮೈಸೂರು ದಸರಾ ಮಹೋತ್ಸವ ಹಿನ್ನಲೆಯಲ್ಲಿ ಮಾತನಾಡಿದ ಅವರು, ಈ ತಿಂಗಳಲ್ಲಿ ಮೈಸೂರು ಜನಪ್ರತಿನಿಧಿಗಳ ಮೊದಲ ಸಭೆ ಕರೆಯುತ್ತೇನೆ ಎಂದಿದ್ದಾರೆ. ಸಭೆಯಲ್ಲಿ ಯಾವ ರೀತಿಯಾಗಿ ಸರಳ ದಸರಾ ಮಾಡಬೇಕು ಅನ್ನೋ ಬಗ್ಗೆ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹ ಮಾಡ್ತೀನಿ. ನಂತರ ಸಿಎಂ ಜೊತೆ ಚರ್ಚೆ ಮಾಡಿ ಹೈ ಪವರ್ ಕಮಿಟಿ ಕರೆಯುತ್ತೇವೆ.
-ಕೋವಿಡ್ ನಿರ್ವಹಣೆ ನಮ್ಮ ಮೊದಲ ಆದ್ಯತೆಯಾಗಿದ್ದು, ಮೂರನೇ ಅಲೆಗೆ ಸಿದ್ಧತೆ ಮಾಡಿಕೊಂಡು, ಅದರ ನಡುವೆಯೇ ಸುರಕ್ಷತೆಯಿಂದ ದಸರಾ ಮಾಡಬೇಕಿದೆ ಎಂದರು. ಇನ್ನಯ ಕಳೆದ ಬಾರಿಯ ಅನುದಾನವನ್ನೇ ಬಳಸಿಕೊಂಡು ದಸರಾ ಆಚರಿಸಲು ಚಿಂತನೆ ಇದ್ದು, ಕೋವಿಡ್ ಅಲೆಯ ಏರಿಳಿತ ಗಮನಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಮೈಸೂರಿನಲ್ಲಿ ಉಸ್ತುವಾರಿ ಸಚಿವ ಎಸ್. ಟಿ.ಸೋಮಶೇಖರ್ ಮಾಹಿತಿ ನೀಡಿದ್ದಾರೆ.