ಪ್ಯೂಮಾ ಶೋರೂಮ್’ನಲ್ಲಿ ಕಳ್ಳತನ ಮಾಡಿದ್ದ ಆರೋಪಿ ಬಂಧನ
1 min read
ಮೈಸೂರು: ಕುವೆಂಪುನಗರ ಠಾಣಾ ಪೋಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದು ಪ್ಯೂಮಾ ಶೋರೂಮ್ ನಲ್ಲಿ ಕಳ್ಳತನ ಮಾಡಿದ್ದ ಆರೋಪಿ ಬಂಧಿಸಿದ್ದಾರೆ.
ಬಂಧಿತ ಆರೋಪಿ 20 ವರ್ಷದ ಪ್ರಜ್ವಲ್. ಪ್ಯೂಮಾ ಶೋರೂಮ್ ಶೆಟರ್ ಮುರಿದು ಶೋರೂಮ್ ನಲ್ಲಿದ್ದ ಹಣ ಮತ್ತು ಇನ್ನಿತರೆ ವಸ್ತುಗಳನ್ನ ದೋಚಿದ್ದ. ಬಂಧಿತ ಆರೋಪಿ ಪ್ರಜ್ವಲ್ ತನ್ನ ಸ್ನೇಹಿತರಾದ ನಿತಿನ್, ಭಾಷಾ, ಚೇತನ್ ಜೊತೆ ಮೈಸೂರು, ಬೆಂಗಳೂರು, ಹೊಸಪೇಟೆ, ಅರಸೀಕೆರೆ ಸೇರಿದಂತೆ ಇತರೆ ಕಡೆ ಇದೆ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ಬಂಧಿತ ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಒಂದು ಬೈಕ್,ಎರಡು ಮೊಬೈಲ್, 5500ನಗದು ವಶಪಡಿಸಿಕೊಳ್ಳಲಾಗಿದೆ. ಕುವೆಂಪುನಗರ ಪೋಲೀಸರ ಕಾರ್ಯ ವೈಖರಿಗೆ ನಗರ ಪೋಲೀಸ್ ಆಯುಕ್ತ ಡಾ.ಬಿ ರಮೇಶ್ ಮತ್ತು ಡಿಸಿಪಿ ಮುತ್ತುರಾಜ್ ಪ್ರಶಂಸಿದ್ದಾರೆ.
