ಮಾಜಿ ಸಿಎಂ ಎಸ್‌ಎಂ ಕೃಷ್ಣ ಇನ್ನಿಲ್ಲ.!
1 min readಬೆಂಗಳೂರು : ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ ನಿಧನರಾಗಿದ್ದಾರೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ನಿಧನರಾದ್ರು.
ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಮಾಜಿ ಸಿ.ಎಂ.ಕೃಷ್ಣ ಅವರು, ಕೇಂದ್ರ ವಿದೇಶಾಂಗ ಮಂತ್ರಿ, ರಾಜ್ಯಪಾಲ ಸೇರಿ ರಾಜ್ಯದ ಸಿಎಂ ಆಗಿ ಸಹ ರಾಜಕೀಯ ಛಾಪು ಮೂಡಿಸಿದ್ರು.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಾಳೆ ಅಂತ್ಯಕ್ರಿಯೆ ಸಾಧ್ಯತೆ. ರಾಜ್ಯದ ಸಿಎಂ ಆಗಿ ಇಡೀ ದೇಶವೇ ತಿರುಗಿ ನೋಡುವಂತ ಆಡಳಿತ ನೀಡಿದ ಹೆಗ್ಗಳಿಕೆ ಇವರದ್ದು, ಕಾಂಗ್ರೆಸ್ ಪಕ್ಷದ ನಾಯಕನಾಗಿ ಬೆಳೆದು ಬಳಿಕ ಬಿಜೆಪಿಗೆ ಸೇರ್ಪಡೆಯಾಗಿದ್ದರು.
ಸದ್ಯ ಸಿಎಂ ಸೇರಿದಂತೆ ಗಣ್ಯರು ಕೃಷ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.