ಕಳಲೆ ಲಕ್ಷ್ಮಿಕಾಂತ ಸ್ವಾಮಿಗೆ ಬೆಣ್ಣೆ ಅಲಂಕಾರ|
1 min read
ನಂಜನಗೂಡು : ಬೆಣ್ಣೆ ಅಲಂಕಾರದಿಂದ ಕಂಗೊಳಿಸಿದ ಕಳಲೆ ಶ್ರೀ ಲಕ್ಷ್ಮಿಕಾಂತ ಸ್ವಾಮಿ. ಹೌದು, ಶ್ರಾವಣ ಮಾಸದ ಕಡೆ ಶನಿವಾರದ ಅಂಗವಾಗಿ ನಂಜನಗೂಡಿನ ಪುರಾಣ ಪ್ರಸಿದ್ಧ ಕಳಲೆ ಶ್ರೀ ಲಕ್ಷ್ಮಿಕಾಂತ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ಶ್ರೀ ಲಕ್ಷ್ಮಿಕಾಂತ ಸ್ವಾಮಿ ಮೂರ್ತಿಯನ್ನು ವಿಶೇಷವಾಗಿ ಬೆಣ್ಣೆಯಿಂದ ಅಲಂಕರಿಸಲಾಗಿತ್ತು

ಬೆಣ್ಣೆಯ ಅಲಂಕಾರದಿಂದ ಕಂಗೊಳಿಸುತ್ತಿದ್ದ ಶ್ರೀ ಲಕ್ಷ್ಮಿಕಾಂತ ಸ್ವಾಮಿ ಅವರ ಮೂರ್ತಿಯನ್ನು ಕಣ್ತುಂಬಿ ಕೊಂಡ ನೂರಾರು ಭಕ್ತರು ತಮ್ಮ ಭಕ್ತಿ ಭಾವ ಮೆರೆದರು
ಕಡೆ ಶ್ರಾವಣದ ಅಂಗವಾಗಿ ದೇವಾಲಯದ ಒಳ ಆವರಣವನ್ನು ವಿದ್ಯುತ್ ದೀಪ ಹಾಗೂ ಹೂಗಳಿಂದ ಅಲಂಕರಿಸಲಾಗಿತ್ತು
ಶ್ರೀ ಲಕ್ಷ್ಮಿಕಾಂತ ಸ್ವಾಮಿ ಜೊತೆಗೆ ಅರವಿಂದ ನಾಯಕಿ ಹಾಗೂ ಅಂಡಾಳಮ್ಮ ದೇವಾಲಯದಲ್ಲೂ ಸಹ ಪೂಜೆ ನಡೆಯಿತು
ಹೂಗಳಿಂದ ಅಲಂಕರಿಸಲಾಗಿದ್ದ ಶ್ರೀ ಅರವಿಂದ ನಾಯಕಿ ಹಾಗೂ ಆಂಡಾಳಮ್ಮ ಸಮೇತ ಶ್ರೀ ಲಕ್ಷ್ಮಿಕಾಂತ ಸ್ವಾಮಿ ಅವರು ಉತ್ಸವ ಮೂರ್ತಿಗಳನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು
ದೇವಾಲಯದ ಪಾರುಪತ್ತೆಗಾರ ಕಳಲೆ ಜಯರಾಮ್ ಮಾತನಾಡಿ ಕಾರ್ಯಕ್ರಮದ ಬಗ್ಗೆ ವಿವರಿಸಿ ಭಕ್ತರು ಹೊಸ ದೇವಾಲಯಗಳನ್ನು ನಿರ್ಮಿಸುವ ಬದಲು ಇಂತಹ ಪುರಾತನ ಹಾಗೂ ಪ್ರಸಿದ್ಧ ದೇವಾಲಯಗಳನ್ನು ಉಳಿಸುವ ನಿಟ್ಟಿನಲ್ಲಿ ಭಕ್ತರು ಸರ್ಕಾರ ಮತ್ತು ಸಾರ್ವಜನಿಕರು ಆಸಕ್ತಿ ವಹಿಸಬೇಕು ಈ ಪುರಾತನ ಹಾಗೂ ಪ್ರಸಿದ್ಧ ದೇವಾಲಯಕ್ಕೆ ಒಂದು ಬಾರಿ ಬಂದು ದರ್ಶನ ಪಡೆದರೆ ಸಾಕು ತಮ್ಮ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ ಎಂದು ತಿಳಿಸಿದರು