ಮೈಸೂರಿನಲ್ಲಿ ಗಂಧದ ಮರ ಕಳ್ಳತನಕ್ಕೆ ವಿಫಲ ಯತ್ನ
1 min readಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಂಧದ ಮರ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.
ಮೈಸೂರಿನ ಹೃದಯ ಭಾಗದಲ್ಲಿ ಈ ಘಟನೆ ನಡೆದಿದ್ದು ನಗರದ ಚೆಲುವಾಂಬ ಆಸ್ಪತ್ರೆ ಉದ್ಯಾನವನದಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆದಿದೆ.
ಖದೀಮರು ಬೆಳ್ಳಂ ಬೆಳಗ್ಗೆ ಗಂಧದ ಮರ ಕದಿಯಲು ಯತ್ನಿಸಿದ್ದಾರೆ ಈ ವೇಳೆ ವಾಯು ವಿಹಾರಿಗಳು ಕಳ್ಳರನ್ನ ಹಿಡಿಯಲು ಮುಂದಾದಾಗ ಕೈಯಲ್ಲಿದ್ದ ಮಚ್ಚು ಬೀಸಿ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಪೋಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸದ ಹಿನ್ನೆಲೆ ಅಧಿಕಾರಿಗಳ ವಿರುದ್ಧ ವಾಯುವಿಹಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.