ಅಪ್ಪು ಅಭಿಮಾನಿಗಳಿಗೆ ಜೇಮ್ಸ್ ಚಿತ್ರ ಗಿಫ್ಟ್- ಸಾಲು ಸಾಲು ಚಿತ್ರ ಸೆಟ್ಟೇರಲೇ ಇಲ್ಲ!

1 min read

ಹೃದಯಾಘಾತದಿಂದ ಮೃತಪಟ್ಟ ಕನ್ನಡದ ರಾಜಕುಮಾರ ಅಪ್ಪುವಿಗೆ ಇಡೀ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿದೆ. ಈ ನಡುವೆ ಪುನೀತ್ ರಾಜ್‌ಕುಮಾರ್‌ರ ಅಕಾಲಿಕ ನಿಧನದಿಂದ ಕನ್ನಡ ಚಿತ್ರರಂಗದ ಅಭಿಮಾನಿಗಳು ಕಣ್ಣೀರಾಗಿದ್ದಾರೆ. ಅತ್ಯಂತ ಹೆಚ್ಚು ಫಿಟ್ ಅಂಡ್ ಫೈನ್ ಆಗಿದ್ದ ಪುನೀತ್ ಅವರ ಈ ಸಾವು ಯಾರಿಗು ಊಹಿಸಲು ಸಹ ಸಾಧ್ಯವಾಗದಾಷ್ಟು ಬೇಸರ ತರಿಸಿದೆ.

ಇಂತಹ ಪುನೀತ್ ನಿರ್ಮಾಪಕರು ಹಾಗೂ ನಿರ್ದೇಶಕರ ಅಚ್ಚುಮೆಚ್ಚು ಎಂದರು ತಪ್ಪಿಲ್ಲ. ಆದರೆ ಈಗ ಪುನೀತ್ ನಟನೆಯ ಸಾಲು ಸಾಲು ಚಿತ್ರಗಳು ಬಾಕಿ ಉಳಿದುಕೊಂಡಿವೆ. ಅಭಿಮಾನಿಗಳ ನೆಚ್ಚಿನ ಜೇಮ್ಸ್ ಚಿತ್ರ ಈಗಾಗಲೇ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಆದರೆ ಇದರ ಮತ್ತಷ್ಟು ಚಿತ್ರೀಕರಣ ಬಾಕಿ ಇದೆ.

-ಇಂಡಸ್ಟ್ರಿಯಲ್ಲಿ ಫಿಟೆಸ್ಟ್ ನಟರಾಗಿದ್ದ ಪುನೀತ್‌, ಸಾಲು ಸಾಲು ಸಿನಿಮಾಗಳನ್ನು ಹೊಂದಿದ್ದರು. ಅವೆಲ್ಲವೂ ಈಗ ಅರ್ಧಕ್ಕೆ ಉಳಿದುಹೋಗಿವೆ. ಇತ್ತ ದ್ವಿತ್ವ ಚಿತ್ರವೂ ಕೂಡ ಸೇಟ್ಟೇರಬೇಕಿತ್ತು. ಆದರೆ ಮುಂದಿನ ತಿಂಗಳಿಗೆ ಇದರ ಪ್ಲ್ಯಾನ್ ಮಾಡಿಕೊಳ್ಳಲಾಗಿತ್ತು. ಆದರೆ ಈ ಚಿತ್ರವು ಪೂರ್ಣ ಆಗಲೇ ಇಲ್ಲ.

ಅಲ್ಲದೆ, ಪುನೀತ್ ರಾಜಕುಮಾರ್‌ಗೆ ದೊಡ್ಡ ಮಟ್ಟದ ಬ್ರೇಕ್ ಕೊಟ್ಟಿದ್ದ ರಾಜಕುಮಾರ ಚಿತ್ರ ನಿರ್ದೇಶಕ ಸಂತೋಷ ಆನಂದ್ ರಾಮ್ ಅವರೊಂದಿಗೆ ಇನ್ನೊಂದು ಚಿತ್ರ ಕೂಡ ಸೆಟ್ಟೇರಬೇಕಿತ್ತು. ಆದರೆ ಚಿತ್ರ ಅನೌನ್ಸ್ ಆಯಿತೆ ವಿನಹ ಚಿತ್ರ ಶುರುವಾಗಲೇ ಇಲ್ಲ. ಈ ಮಧ್ಯೆ ಪುನೀತ್‌ ಅವರ ಪಿಆರ್‌ಕೆ ಬ್ಯಾನರ್ ನಲ್ಲಿ ಸುಮಾರು ನಾಲ್ಕೈದು ಸಿನಿಮಾ ಕೂಡ ಬರಬೇಕಿತ್ತು. ಇದೀಗಾ ಆ ಚಿತ್ರವು ಕೂಡ ಬ್ರೇಕ್ ಬಿದ್ದಂತೆ ಆಗಿದೆ. ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದ ಪುನೀತ್ ಇದೀಗಾ ಎಲ್ಲರನ್ನ‌ ಅಗಲಿದ್ದಾರೆ. ಆದರೆ ಅವರ ಸರಳತೆ, ಪ್ರೀತಿ, ಚಿತ್ರಗಳು ಎಲ್ಲರ ಹೃದಯ ಸಿಂಹಾಸನದಲ್ಲಿ ಇಂದಿಗು ಮುಂದಿಗು ಶಾಶ್ವತವಾಗಿರಕನ್ನ

About Author

Leave a Reply

Your email address will not be published. Required fields are marked *