ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ.ಸಿ.ಎನ್ ಚಂದ್ರಶೇಖರ್ ನಿಧನ
1 min readಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಮತ್ತು ವಿತರಕ ಕೆ.ಸಿ.ಎನ್ ಚಂದ್ರಶೇಖರ್ ಅವರು ನಿಧನರಾಗಿದ್ದಾರೆ. 69 ವರ್ಷದ ಕೆ.ಸಿ.ಎನ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.
ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕರಾಗಿದ್ದ ಚಂದ್ರಶೇಖರ್ ಅವರು ಬದ್ದತೆ ಮತ್ತು ಸಾಹಸ ಪ್ರವೃತ್ತಿಯನ್ನು ಮೈಗೂಡಿಸಿಕೊಂಡು ಉತ್ಕೃಷ್ಟ ಚಿತ್ರಗಳನ್ನು ನಿರ್ಮಾಣ ಮಾಡಿದವರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮೂರು ಬಾರಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ತಂದೆ ಕೆ.ಸಿ.ಎನ್.ಗೌಡರ ಮಾರ್ಗದರ್ಶನದಲ್ಲಿ ಚಲನಚಿತ್ರ ನಿರ್ಮಾಣ ಪ್ರದರ್ಶನ ಚಿತ್ರ ವಿತರಣೆಯಲ್ಲಿ ಅಪಾರ ಅನುಭವಗಳಿಸಿದ್ದರು.
ಬೆಂಗಳೂರಿನ “ನವರಂಗ್ ” “ಊರ್ವಶಿ” ಮತ್ತು ದೊಡ್ಡಬಳ್ಳಾಪುರದ “ರಾಜ್ ಕಮಲ್ ” ಚಿತ್ರಮಂದಿರದ ಮಾಲೀಕರಾಗಿ ಪ್ರದರ್ಶಕರಾಗಿದ್ದರು, ಐವತ್ತಕ್ಕೂ ಹೆಚ್ಚು ಚಿತ್ರ ನಿರ್ಮಾಣ ಮಾಡಿದ್ದ ಇವರು “ದಾರಿ ತಪ್ಪಿದ ಮಗ ” “ಹುಲಿಯ ಹಾಲಿನ ಮೇವು” “ಬಬ್ರುವಾಹನ” “ಅಂತ ” ಮುಂತಾದ ಶ್ರೀಮಂತ ಚಿತ್ರಗಳನ್ನ ನಿರ್ಮಿಸಿದ್ದರು.
ಸುಮಾರು ಐನೂರು ಚಿತ್ರಗಳನ್ನ ವಿತರಣೆ ಮಾಡಿದ್ದರು , ಸೆನ್ಸಾರ್ ಮಂಡಳಿಗೆ ಸದಸ್ಯರಾಗಿ ಆರು ವರ್ಷಗಳ ಸೇವೆ ಸಲ್ಲಿಸಿದ್ದರು , ಪನೋರಮಾ ವಿಭಾಗ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಿತಿ ಹಾಗೂ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಿತಿ ತೀರ್ಪುಗಾರಾಗಿ, ಮುಂಬೈನ ಭಾರತೀಯ ಚಲನಚಿತ್ರ ಒಕ್ಕೂಟದ ಉಪಾಧ್ಯಕ್ಷರಾಗಿ, ಆಯ್ಕೆಯಾಗಿದ್ದರು ಚಂದ್ರು , ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿ ಹಲವಾರು ಬದಲಾವಣೆ ತಂದವರು.
ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ಕುಮಾರ್ ಅವರ ಆಪ್ತ ವಲಯದಲ್ಲಿ ಇದ್ದರು. ಶೇಷಾದ್ರಿಪುರದ ಶಿಕ್ಷಣ ದತ್ತಿಯ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತ ಸುಮಾರು ನೂರವೈತ್ತು ವಿದ್ಯಾರ್ಥಿಗಳಿಗೆ ಆಶ್ರಯವಾಗಿದ್ದರು.