ಅಭಿವೃದ್ಧಿಗಾಗಿ ನಾನು ಯಾರ ಕಾಲು ಬೇಕಾದರು ಹಿಡಿಯುತ್ತೇನೆ- ಸಂಸದ ಪ್ರತಾಪ ಸಿಂಹ!!

1 min read

ಮೈಸೂರು:

ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಸುದ್ದಿಗೋಷ್ಠಿ.
ಮೈಸೂರಿನ ಅಭಿವೃದ್ಧಿಗಾಗಿ ಯಾರ ಕಾಲು ಬೇಕಾದರೂ ಹಿಡಿಯುತ್ತೇನೆ.
ಮೈಸೂರು – ಕೊಡಗು ಅಭಿವೃದ್ಧಿಗಾಗಿ.
ನಾನು ಯಾರ ಕೈ-ಕಾಲುದ್ರು ಹಿಡಿಯುತ್ತೇನೆ, ಅಂಗಲಾಚುತ್ತೇನೆ.
ಚುನಾವಣೆ ಬಂದಾಗ ರಾಜಕಾರಣ ಮಾಡೋಣಾ!
ಉಳಿದ ಸಮಯದಲ್ಲಿ ಅಭಿವೃದ್ಧಿ, ರಾಜಕಾರಣ ಮಾಡೋಣಾ.
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುತ್ತೇನೆ.
ಗೆದ್ದ ಎಲ್ಲರಿಗೂ ಅಭಿನಂದನೆಗಳು.
ಅಭಿವೃದ್ಧಿ ಪರ ಇರೋರನ್ನು ಜಿಲ್ಲಾ ಉಸ್ತುವಾರಿ ಮಾಡಿ.
ಅಭಿವೃದ್ಧಿ ವಿಚಾರದಲ್ಲಿ ನಾನು ಸಿಎಂ ಮನೆಗೆ ಹೋಗುತ್ತೇನೆ.

ವಿಧಾನಸಭಾ ಚುನಾವಣಾ ಫಲಿತಾಂಶದ ಏಫೆಕ್ಟ್.
ಇದು ಲೋಕಸಭಾ ಚುನಾವಣೆ ಮೇಲೆ ಬೀರಲ್ಲ.
ದೇಶಕ್ಕೆ ಎಂಥಹ ನಾಯಕ ಬೇಕು ಅಂತಾ ಕನ್ನಡಿಗರಿಗೆ ಗೊತ್ತಿದೆ.
ಒಂದು ಚುನಾವಣೆಗೂ ಮತ್ತೊಂದು ಚುನಾವಣೆಗು ಭಿನ್ನ ಇದೆ.
*ಗ್ಯಾರಂಟಿ ಕಾರ್ಡ್ ವಿಚಾರದಲ್ಲಿ ಬಿಜೆಪಿ ಎಚ್ಚೆತ್ತು ಕೊಳ್ಳಬೇಕಿತ್ತು.*
ಎಚ್ಚೆತ್ತುಕೊಂಡಿದ್ದಾರೆ ಬಿಜೆಪಿಗೆ ಇವತ್ತು ಈ ಸ್ಥಿತಿ ಬರುತ್ತಿರಲಿಲ್ಲ.
ಗ್ಯಾರಂಟಿ ಸ್ಕೀಂ ಪರ ನಾನು ಇದ್ದೇನೆ.
ಅದಾಯದ ಆಧಾರದ ಮೇಲೆ ಖರ್ಚು ಮಾಡಬೇಕು ಎಂಬ ನಿಯಮ ವಿಧಾನಸಭೆಯಲ್ಲಿ ಇದೆ.
ವಿತ್ತಿಯ ಹೊಣೆಗಾರಿಕೆ ಬಿಲ್ ಕರ್ನಾಟಕದಲ್ಲಿ ಪಾಸ್ ಆಗಿದೆ.
ಮುಂದಿನ ತಲೆ ಮಾರನ್ನು ಅಪಾಯಕ್ಕೆ ತಳ್ಳಬೇಡಿ.
ಗ್ಯಾರಂಟಿ ಕಾರ್ಡ್ ಅಲ್ಲಿ ಕಂಡೀಷನ್ ಅಪ್ಲೇ ಅಂತಾ ಎಲ್ಲೂ ಹಾಕಿಲ್ಲ.
ಎಲ್ಲಾ ಮನೆಯ ಯಜಮಾನಿಗೆ 2 ಸಾವಿರ ಕೊಡಬೇಕು.
ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪಯಣಕ್ಕೆ ಅವಕಾಶ ಕೊಡಬೇಕು.
ಜೂನ್ 1 ರವರೆಗೆ ಕಾಯುತ್ತೇನೆ.
*ಜೂನ್ 1 ರಿಂದ 200 ಯೂನಿಟ್ ಒಳಗೆ ವಿದ್ಯುತ್ ಬಿಲ್ ಬಂದರೆ ಬಿಲ್ ಕಟ್ಟಬೇಡಿ.*
200 ಯೂನಿಟ್ ಮೇಲೆ ಎಷ್ಟು ಯೂನಿಟ್ ಬಳಸುತ್ತಿರಾ ಹೆಚ್ಚುವರಿಗೆ ಮಾತ್ರ ಕಟ್ಟಿ.
ಕಂಡೀಷನ್ ಹಾಕಿದರೆ ಜೂನ್ 1 ರಿಂದ ಹೋರಾಟ ಮಾಡುತ್ತೇವೆ.


*ನಿಮ್ಮ‌ ಮುಖ ನೋಡಿ ಮತ ಹಾಕಿಲ್ಲ.
ಗ್ಯಾರಂಟಿ ಕಾರ್ಡ್ ನೋಡಿ ಮತ ಹಾಕಿದ್ದಾರೆ ಅದು ನೆನಪಿರಲಿ.
ನಾವು ಸೋತಿದ್ದೇವೆ, ನಾವು ಸತ್ತಿಲ್ಲ.
ಕೊಟ್ಟ ಭರವಸೆ ಈಡೇರಿಸಿ.
ರಾಜಸ್ಥಾನದಲ್ಲಿ ಇದೇ ರೀತಿ ಹೇಳಿ ಇವತ್ತಿನವರೆಗೆ ಮಾಡಿಲ್ಲ.
ಸಿದ್ದರಾಮಯ್ಯ ಅವರು ಅಥವಾ ನಾನು ಯಾರು ಆರ್ಥಿಕ ತಜ್ಞರಲ್ಲ.
ಸಿಎಂ ಕುರ್ಚಿ ಅನ್ನೋದು ಯಾರೋ ಸ್ವತ್ತ ಅಲ್ಲ.
ಆದರೆ ಪೊಲೀಸ್ ವ್ಯವಸ್ಥೆ ಅನ್ನೋದು ಶಾಶ್ವತ ಇರುತ್ತದೆ.
ವಿಧಾನಸೌಧದದಲ್ಲಿ ಕೂತು ಪೊಲೀಸ್ ಇಲಾಖೆಗೆ ಧಮ್ಕಿ ಹಾಕುತ್ತೀರಾ?
ಮೊದಲು ಪೊಲೀಸ್ ಇಲಾಖೆಗೆ ಧಮ್ಕಿ ಹಾಕುವುದು ನಿಲ್ಲಿಸಿ.
ಫೆಬ್ರವರಿಯಲ್ಲಿ ಅಶ್ವಥ್ ನಾರಾಯಣ್ ನೀಡಿದ ಹೇಳಿಕೆಗೆ ಈಗ ಧಮ್ಕಿ ಹಾಕಿ FIR ಮಾಡಿಸಿದ್ದಾರೆ.
ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ.

ಕಾಮಗಾರಿಗೆ ಹಣ ಬಿಡುಗಡೆ ಮಾಡುವುದನ್ನು ಸರಕಾರ ತಡೆದ ವಿಚಾರ.
ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ ತಿರುಗೇಟು.
ಎಷ್ಟು ಪರ್ಸೆಂಟ್ ಕಮೀಷನ್ ವೈಟ್ ಮಾಡುತ್ತಿದ್ದೀರಾ?
ಪರ್ಸೆಂಟೆಜ್ ಗಾಗಿ ನೀವು ಇಂಥ ಆದೇಶ ಮಾಡಿದ್ದಿರಾ?
ಆಡಳಿತ ನಡೆಸುವವರು ಬದಲಾಗುತ್ತಾರೆ.
ಆಡಳಿತ ವ್ಯವಸ್ಥೆ ಬದಲಾಗುವುದಿಲ್ಲ.
ವ್ಯವಸ್ಥೆ ಹೀಗಿರುವಾಗ ಕಾಮಗಾರಿಗೆ ಹಣ ಬಿಡುಗಡೆ ಯಾಕೆ ತಡೆದಿದ್ದಿರಾ?
ಬಿಜೆಪಿ ಸರಕಾರದ ಮೇಲೆ
40% ಕಮೀಷನ್.
ಬಿಟ್ ಕಾಯಿನ್ ಬಗ್ಗೆ ಕಾಂಗ್ರೆಸ್ ಆರೋಪ ಮಾಡಿತ್ತು.
ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದೆ.
ಹೀಗಾಗಿ ತಕ್ಷಣ ತನಿಖೆ ಮಾಡಿ.
40% ಕಮೀಷನ್ ಸರಕಾರ ಅಂತಾ ಊರೂರು ತಿರುಗಿ ಪ್ರಚಾರ ಮಾಡಿದ್ದೀರಾ.
ಈಗ ನೀವೆ ಅಧಿಕಾರಕ್ಕೆ ಬಂದಿದ್ದಿರಾ ತನಿಖೆ ಮಾಡಿ.
*ತಪ್ಪು ಮಾಡಿದವರನ್ನು ಶಿಕ್ಷಿಸಿ ನಾನೇ ಬಂದು ಕಾಲಿಗೆ ಬಂದು ನಮಸ್ಕಾರ ಮಾಡುತ್ತೇನೆ.*
ಕಮೀಷನ್ ಪಡೆವರನ್ನು ಜೈಲಿಗೆ ಕಳುಹಿಸುವ ಜವಾಬ್ದಾರಿ ನಿಮ್ಮದು.
ಈ ಜವಾಬ್ದಾರಿ ನಿಭಾಯಿಸದೆ ಇದ್ದರೆ ನೀವು ಹೇಳಿದ್ದು ಸುಳ್ಳು ಅಂತಾ ಆಗುತ್ತದೆ.

ಮೈಸೂರು

ನಾನು ಅಂತರಾಳದಿಂದಲೇ ನಮ್ಮ ಕಾರ್ಯಕರ್ತರ ಕ್ಷಮೆ ಕೇಳಿದ್ದೇನೆ.
ನಮ್ಮ‌ ಕಾರ್ಯಕರ್ತರ ಟಾರ್ಗೆಟ್ ನಿಧಾನವಾಗಿ ಶುರುವಾಗಿದೆ.
ಬಿಜೆಪಿ ಕಾರ್ಯಕರ್ತರು ಅಪಾಯದಲ್ಲಿದ್ದಾರೆ.
ನಮ್ಮ‌ ಕಾರ್ಯಕರ್ತರ ಅಪಾಯಕ್ಕೆ ತಳ್ಳಿದ್ದಕ್ಕೆ ನಾನು ಕ್ಷಮೆ ಕೇಳಿದ್ದೇನೆ.
ನಮ್ಮ ಕಾರ್ಯಕರ್ತರು ನಿಜವಾಗಿಯೂ ನೊಂದಿದ್ದಾರೆ.
ದೇಶ, ಧರ್ಮ ಅಂತಾ ನಮ್ಮ ಕಾರ್ಯಕರ್ತರು ದುಡಿಯುತ್ತಾರೆ.
ನಮ್ಮಲ್ಲಿ ಗುತ್ತಿಗೆದಾರಿಕೆ ಮಾಡುವ ಕಾರ್ಯಕರ್ತರೆ ಕಡಮೆ.
ಸುದ್ದಿಗೋಷ್ಠಿಯಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ.

About Author

Leave a Reply

Your email address will not be published. Required fields are marked *