ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆಗೆ ಪ್ರಮೋದಾದೇವಿ ಒಡೆಯರ್ ವಿರೋಧ

1 min read

ಮೈಸೂರು: ಚಾಮುಂಡಿ ಬೆಟ್ಟ ಪ್ರಾಧಿಕಾರ ರಚನೆಗೆ ನಮ್ಮ ವಿರೋಧವಿದೆ ಎಂದು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು ಹೇಳಿದ್ದಾರೆ.

ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ಕಾರದ ಆಕ್ಟ್ ಅನ್ನು ನಾವು ಪ್ರಶ್ನೆ ಮಾಡಿದ್ದೇವೆ 1953 ಅಲ್ಲಿ ನಾವು ನಮ್ಮ ಖಾಸಗಿ ಆಸ್ತಿಯ ಲಿಸ್ಟ್ ಅನ್ನು ಕೇಂದ್ರ ಸರ್ಕಾರಕ್ಕೆ ಕೊಟ್ಟಿದ್ದೇವೆ ಅದರಲ್ಲಿ ಚಾಮುಂಡಿ ಬೆಟ್ಟವು ಕೂಡ ಸೇರಿದೆ. ಈಗ ಸರ್ಕಾರ ಪ್ರಾಧಿಕಾರ ಮಾಡಲು ಹೊರಟಿದೆ ಇದನ್ನು ನಾವು ಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದೇವೆ ಅಂತ ತಿಳಿಸಿದರು.

ಇದು ಕಾನೂನಾತ್ಮಕವಾಗಿಲ್ಲ ಅಂತ ನಾವು ಹೇಳಿದ್ದೇವೆ ಕೇಂದ್ರ ಸರ್ಕಾರದ ಸರ್ಕ್ಯುಲರ್ ನಲ್ಲಿ ಕೂಡ ಅದನ್ನು ಹೇಳಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ರಾಜೇಂದ್ರ ವಿಲಾಸ್ ಅರಮನೆ, ಚಾಮುಂಡಿ ಬೆಟ್ಟ ಅದರ ಆಸುಪಾಸಿನ ಜಾಗ, ಮಹಾ ಬಲೇಶ್ವರ, ಜ್ವಾಲಾಮುಖಿ ದೇವಸ್ಥಾನ, ದೇವಿಕೆರೆ , ನಂದಿ , 700 ಮೆಟ್ಟಿಲು , 3 ಪಂಪ್ ಹೌಸ್, ಲಾಲತಾದ್ರಿ, ಸೇರಿದಂತೆ ಇನ್ನೂ ಅನೇಕ ಜಾಗಗಳು ನಮ್ಮ ಖಾಸಗಿ ಆಸ್ತಿಗಳು.

ಸರ್ಕಾರ ದೇವಸ್ಥಾನಗಳನ್ನು ತೆಗೆದುಕೊಳ್ಳೋಕೆ ನೋಡ್ತಿದೆ. 2001 ರಲ್ಲಿ ರಿಟ್ ಹಾಕಿದ್ದೇವೆ ಅದು ಇನ್ನೂ ಹೈ ಕೋರ್ಟ್ ಅಲ್ಲಿದೆ ಹಾಗಿದ್ದರೂ ಈಗ ಪ್ರಾಧಿಕಾರ ತಂದಿದ್ದಾರೆ ಅದು ತಪ್ಪು ಅಂತ ನನ್ನ ಅಭಿಪ್ರಾಯ ಅಂತ ಸುದ್ದಿಗೋಷ್ಟಿಯಲ್ಲಿ ಪ್ರಮೋದಾ ದೇವಿ ಒಡೆಯರ್ ಹೇಳಿಕೆ.

ಖಾಸಗಿ ಪ್ರಾಪರ್ಟಿ ಯಾವುದು ಅಂತ ಸರ್ಕಾರಕ್ಕೆ ಗೊತ್ತು. 2001 ರ ಕೇಸ್ ಪೆಂಡಿಗ್ ಇದೆ ಅದಕ್ಕೂ ಮೊದಲೇ ಸರ್ಕಾರ ಯಾಕೆ ಪ್ರಾಧಿಕಾರ ಮಾಡ್ತಿದೆ..? ಆ ಕೇಸ್ ಕ್ಲಿಯರ್ ಆಗ್ಲಿ 1974 ರಲ್ಲಿ ನಿರ್ವಹಣೆ ಮಾಡಲು ಕಷ್ಟ ಅಂತ ಪತ್ರ ಬರೆದಿದ್ದು ಬೇರೆ. ಅಂದು ಬೇರೆ ಬೇರೆ ಕಾರಣ ಇತ್ತು. ಹಾಗಂತ ಮ್ಯಾನೇಜ್ ಮಾಡಿ ಅಂತ ಕೊಟ್ಟಾಗ ಮಾಡ್ಲಿ ನಾವು ನೀವೇ ಸ್ವಂತ ಮಾಡಿಕೊಳ್ಳಿ ಅಂತ ಕೊಟ್ಟಿಲ್ಲ. 2001 ರ ಕೇಸ್ ನಮ್ಮಂತೆ ಆದ್ರೆ ನಾವೇ ದೇವಸ್ಥಾನ ನಿರ್ವಹಣೆ ಮಾಡ್ತೀವಿ ಈ ಹಿಂದೆ ಪೂರ್ವಜರ ಹಾದಿಯಲ್ಲೇ ನಾವು ಸಾಗುತ್ತಿದ್ದೇವೆ. ಅದನ್ನು ಬಿಟ್ಟು ಬೇರೆ ಮಾರ್ಗದಲ್ಲಿ ಹೋಗಲ್ಲ ಚಾಮುಂಡಿ ಬೆಟ್ಟವನ್ನು ನಾವು ಉಳಿಸಿಕೊಳ್ಳಲು ಹೊರಟಿದ್ದೇವೆ. ಬೆಟ್ಟ ಬೆಟ್ಟದ ಹಾಗೆ ಇರಬೇಕು ವೈನಾಡು, ಕೊಡಗು ರೀತಿ ಆಗದೆ ಇರಲಿ ಎನ್ನುವುದು ನಮ್ಮ ಉದ್ದೇಶ ಎಂದರು.

1950 ರಲ್ಲಿ ಖಾಸಗಿ ಪ್ರಾಪರ್ಟಿ ಲಿಸ್ಟ್ ಮಾಡಿದ್ರು ಸರ್ಕಾರಿ ಕಾರಬು ಇರ್ಲಿ, ಏನೇ ಇರ್ಲಿ, ಆವಾಗ ಲಿಸ್ಟ್ ನಲ್ಲಿ ಕೊಟ್ಟಿದ್ದು ಬಿಟ್ಟು ಬೇರೇನೂ ನಾವು ಇಟ್ಟುಕೊಂಡಿಲ್ಲ . ಅನೇಕ ಕಾರ್ಖಾನೆಗಳನ್ನು ಬಿಟ್ಟುಕೊಟ್ಟಿದ್ದೇವೆ. ಅದನ್ನು ನಾವು ಕೇಳಿದ್ದೇವಾ ? ಸರ್ಕಾರಗಳು ಬದಲಾದಾಗ ಪರಿಸ್ಥಿತಿಗಳು ಕೂಡ ಬದಲಾಗುತ್ತಿದೆ. ಪ್ರಾಧಿಕಾರ ಮಾಡಿರೋದು ಸರಿಯಿಲ್ಲ. ಸರ್ಕಾರದ ಈ ನಡೆ ಸರಿಯಿಲ್ಲ ಎಂದರು.

ಈ ಹಿಂದೆಯಿಂದಲೂ ತೊಂದರೆ ಕೊಟ್ಟುಗೊಂಡು ಬರ್ತಾನೆ ಇದ್ದಾರೆ. ಈ ಸರ್ಕಾರ ಆ ಸರ್ಕಾರ ಅಂತೇನಿಲ್ಲ ಎಲ್ಲ ಸರ್ಕಾರಗಳು ಕೂಡ ನಮಗೆ ತೊಂದರೆ ಕೊಡ್ತಾನೆ ಇದೇ.

ನಮ್ಮ ಯಜಮಾನರು 4 ಬಾರಿ ಎಂಪಿ ಆಗಿದ್ರು ಅವ್ರು ಒಂದು ಬಾರಿಯೂ ಅಧಿಕಾರಿಗಳನ್ನು ಕರೆದು ನನ್ನ ಜಾಗ ನಮಗೆ ಕೊಡಿ ಎಂದು ಕೇಳಿಲ್ಲ. ಯಾವ ಜಾಗವನ್ನು ನಾವು ಮಾಡಿಕೊಂಡಿಲ್ಲ . ಈಗ ನನ್ನ ಮಗ ಎಂಪಿ ಆಗಿದ್ದಾರೆ. ಅವ್ರು ಜನರ ಸೇವೆ ಮಾಡಲು ಸಂಸದರಾಗಿದ್ದಾರೆ ನಾನು ಅವರನ್ನು ಕೂಡ ಈ ಬಗ್ಗೆ ಕೇಳಲ್ಲ ನಾನು ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇನೆ ನಮ್ಮ ಆಸ್ತಿ ವಿವಾದವನ್ನು ನಾವು ಕಾನೂನು ಮೂಲಕವೇ ಬಗೆ ಹರಿಸಿಕೊಳ್ಳುತ್ತೇವೆ ಎಂದು ಮೈಸೂರಿನಲ್ಲಿ ಪ್ರಮೋದ ದೇವಿ ಒಡೆಯರ್ ಹೇಳಿಕೆ ನೀಡಿದ್ದಾರೆ.

About Author

Leave a Reply

Your email address will not be published. Required fields are marked *