ಮೈಸೂರು ಆರೋಗ್ಯಾಧಿಕಾರಿಯನ್ನ ತರಾಟೆಗೆ ತೆಗೆದುಕೊಂಡ ಜನಪ್ರತಿನಿಧಿಗಳು
1 min readಮೈಸೂರು: ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಅಮರ್‌ನಾಥ್ ಮೇಲೆ ಜನಪ್ರತಿನಿಧಿಗಳು ಮುಗಿಬಿದ್ದಿದ್ದಾರೆ. ಪಕ್ಷಾತೀತವಾಗಿ ಡಿಹೆಚ್‌ಓಗೆ ತರಾಟೆ ತೆಗೆದುಕೊಂಡಿದ್ದಾರೆ.
ಇಂದು ಕೊರೊನಾ ನಿಯಂತ್ರಣ ಸಂಬಂಧ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಯಿತು. ಸಭೆಯ ವೇಳೆ ಡಿಹೆಚ್‌ಓ ಅಮರ್‌ನಾಥ್‌ರನ್ನ ಸಂಸದ, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ತರಾಟೆಗೆ ತೆಗೆದುಕೊಂಡರು.
ಶಾಸಕ ಮಂಜುನಾಥ್ ಹುಣಸೂರು ಕ್ಷೇತ್ರಕ್ಕೆ ಔಷಧಿ ಒದಗಿಸದ ಪ್ರಶ್ನೆ ಎತ್ತಿದದರು. ಇದಕ್ಕೆ ಜನಪ್ರತಿನಿಧಿಗಳು ಧ್ವನಿಗೂಡಿಸಿದರು. ಸಂಸದ ಪ್ರತಾಪ್ ಸಿಂಹ, ರಾಮ್‌ದಾಸ್, ಹೆಚ್.ವಿಶ್ವನಾಥ್, ಶಾಸಕ ತನ್ವೀರ್‌ಸೇಠ್, ಯತೀಂದ್ರ ಸಿದ್ದರಾಮಯ್ಯ, ಸಾರಾ ಮಹೇಶ್ ಸೇರಿ ಹಲವರು ದೂರುಗಳ ಸುರಿಮಳೆಗೈದರು. ಕೊರೊನಾ ನಿರ್ವಹಣೆಯಲ್ಲಿ ತೀವ್ರ ನಿರ್ಲಕ್ಷ್ಯ ತೋರಿಸಿದ್ದಕ್ಕೆ ಅಧಿಕಾರಿಯನ್ನ ನಿಲ್ಲಿಸಿ ಜನಪ್ರತಿನಿಧಿಗಳು ಬೈದಿದ್ದಾರೆ. ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಕರ್ ಡಿಹೆಚ್‌ಓ ವಿರುದ್ಧ ಕೆಂಡಾಮಂಡಲರಾದರು.
ಜಿಲ್ಲಾಡಳಿತ ಔಷಧಿ ದಾಸ್ತಾನಿಲ್ಲ ಎಂದು ಹೇಳುತ್ತೆ. ಆದರೆ ಜನಪ್ರತಿನಿಧಿಗಳು ಖರೀದಿ ಮಾಡಿದ್ರೆ ಔಷಧಿ ಸಿಕ್ತಿದೆ. ಔಷಧಿ ಕೊರತೆ ಹೇಳಿಕೆ ಬಗ್ಗೆ ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.