ಮೇ.18ಕ್ಕೆ ಮೈಸೂರು ಡಿಸಿ ಜೊತೆ ಪ್ರಧಾನಿ-ಸಿಎಂ ವಿಡಿಯೋ ಸಂವಾದ!
1 min readಮೈಸೂರು: ರಾಜ್ಯದಲ್ಲಿ ಕರೋನಾ ಹೆಚ್ಚಳ ಹಿನ್ನಲೆಯಲ್ಲಿ ಹಲವು ಜಿಲ್ಲೆಯಲ್ಲಿ ಕರೋನಾ ಕಂಟ್ರೋಲ್ಗು ಸಿಗದೆ ತನ್ನ ನಾಗಲೋಟ ಮುಂದುವರೆಸಿದೆ. ಅದರಲ್ಲು 17 ಜಿಲ್ಲೆಗಳ ಪೈಕಿ ಮೈಸೂರು ಕೂಡ ಒಂದಾಗಿದ್ದು ಇವರ ಜೊತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಸಂವಾದ ನಡೆಸಲಿದ್ದಾರೆ.
ದಿನಾಂಕ 18/05/2021 ರ ಮಂಗಳವಾರ ಬೆಳಗ್ಗೆ 11ಗಂಟೆಗೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಈ ವೇಳೆ ಸಿಎಂ ಕೂಡ ರಾಜ್ಯದಿಂದ ಉಪಸ್ಥಿತರಿದ್ದು, ಈ ಸಂವಾದದ ವೇಳೆ ಉಸ್ತುವಾರಿ ಸಚಿವರು, ಜಿಲ್ಲಾ ಮಟ್ಟದ ಅಧಿಕಾರಿಗಳು, ಕಾರ್ಯದರ್ಶಿಗಳು ಉಪಸ್ಥಿತರಿರುವಂತೆ ಸೂಚಿಸಿದ್ದಾರೆ. ಈ ವೇಳೆ ರಾಜ್ಯದ ಪರಿಸ್ಥಿತಿ ಜೊತೆಗೆ 17 ಜಿಲ್ಲೆಯ ಪ್ರಮುಖ ಮಾಹಿತಿ ಸಂಗ್ರಹಿಸಿ ಆಯಾ ಜಿಲ್ಲೆಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಲಿದ್ದಾರೆ.