ಬಿಗ್ ಬಜೆಟ್ ಸಿನಿಮಾಗೆ ರೆಡಿಯಾದ ಯುವರಾಜಕುಮಾರ: ಮತ್ತೆ ಸಿನಿಮಾರಂಗಕ್ಕೆ ನಿಖಿಲ್ ಕುಮಾರ್ ಎಂಟ್ರಿ
1 min read
ಸ್ಯಾಂಡಲ್ ವುಡ್ ನ ಯುವರಾಜ ನಿಖಿಲ್ ಕುಮಾರ್ ಎರಡು ವರ್ಷದ ಬ್ರೇಕ್ ನಂತ್ರ ಮತ್ತೆ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ…ಚುನಾವಣೆ ಮುಗಿಸಿಕೊಂಡು ಮತ್ತೆ ಸಿನಿಮಾಗಳ ಕಡೆ ಗಮನ ಹರಿಸುತ್ತಿರೋ ನಿಖಿಲ್ ಗಾಗಿ ತಮಿಳಿನ ಪ್ರಖ್ಯಾತ ಲೈಕಾ ಪ್ರೊಡಕ್ಷನ್ಸ್ ಚಿತ್ರ ನಿರ್ಮಾಣ ಮಾಡಲು ಸಜ್ಜಾಗಿದೆ.
ಕಾಲಿವುಡ್ ನಲ್ಲಿ ಬಿಗ್ ಬಜೆಟ್ ಸಿನಿಮಾಗಳಿಗೆ ಖ್ಯಾತಿ ಪಡೆದಿರೋ ಲೈಕಾ ಸಂಸ್ಥೆ ಕತ್ತಿ, 2.0, ವಡಾ ಚೆನೈ , ದರ್ಬಾರ್ , PS1, PS2, ಡಾನ್ ನಂತಹ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ಮಾಣ ಮಾಡಿತ್ತು…ಸದ್ಯ ಇಂಡಿಯನ್ 2, ಲಾಲ್ ಸಲಾಂ, ಚಂದ್ರಮುಖಿ2, ಚಿತ್ರಗಳನ್ನ ನಿರ್ಮಾಣ ಮಾಡುತ್ತಿದೆ ಲೈಕಾ ಸಂಸ್ಥೆ..ಇದೀಗ ನಿಖಿಲ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಡ್ತಿದೆ…

ಇನ್ನು ಮೊದಲ ಬಾರಿಗೆ ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡ್ತಿದೆ ಲೈಕಾ ಸಂಸ್ಥೆ…ಕಮಲ್ ಹಾಸನ್ , ವಿಕ್ರಂ, ಅಜಿತ್, ರಜಿನಿಕಾಂತ್ , ವಿಜಯ್ ರಂತಹ ಸೂಪರ್ ಸ್ಟಾರ್ ಚಿತ್ರಗಳಿಗೆ ಬಂಡವಾಳ ಹಾಕಿರೋ ಸಂಸ್ಥೆ ಮೊದಲ ಬಾರಿಗೆ ಕನ್ನಡದ ನಟನ ಚಿತ್ರ ನಿರ್ಮಾಣ ಮಾಡಲು ಮುಂದಾಗಿದೆ…ಇದೇ ತಿಂಗಳು 23 ರಂದು ನಿಖಿಲ್ ಅಭಿನಯದ ಲೈಕಾ ನಿರ್ಮಾಣದ ಚಿತ್ರದ ಮುಹೂರ್ತ ನಡೆಯಲಿದೆ…ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ನಿರ್ಮಾಣ ಆಗ್ತಿರೋ ಈ ಚಿತ್ರವನ್ನ ಯಾರು ನಿರ್ದೇಶನ ಮಾಡಲಿದ್ದಾರೆ ಅನ್ನೋ ಕುತೂಹಲ ಹೆಚ್ಚಾಗಿದೆ….