ರಾಜ್ಯ ಸರ್ಕಾರದಿಂದ ಕರೋನಾ ತಡೆಗೆ ಹೊಸ ಮಾರ್ಗಸೂಚಿ
1 min readಮೈಸೂರು: ರಾಜ್ಯ ಸರ್ಕಾರದಿಂದ ಕರೋನಾ ತಡೆಗಟ್ಟಲು ಹೊಸ ಮಾರ್ಗಸೂಚಿ ಬಂದಿದ್ದು, ಇದರಲ್ಲಿ ಕೊಂಚ ಬದಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ ಆಗುತ್ತಿರೋ ಜನದಟ್ಟಣೆಯನ್ನ ಕಂಟ್ರೋಲ್ ಮಾಡಲು ಇಂದಿನಿಂದ ಅನ್ವಯ ಆಗುವಂತೆ ಅಂದರೆ (2-5-2021) ಸಂತೆ ಹಾಗೂ ವಾರದ ಸಂತೆಯನ್ನ ನಿರ್ಬಂಧಿಸಲಾಗಿದೆ.
ಇದರ ಬದಲಿಗೆ ಬೆಳಿಗ್ಗೆ 6.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೂ ಹಾಪ್ಕಾಮ್ಸ್, ಎಲ್ಲಾ ಹಾಲಿನ ಬೂತುಗಳು, ತಳ್ಳುವಗಾಡಿ ಮೂಲಕ ಹಣ್ಣು ತರಕಾರಿಗಳನ್ನು ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ.
ಅಲ್ಲದೆ APMC, ದಿನಸಿ ಅಂಗಡಿಯನ್ನ ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 12ರ ವರೆಗೆ ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ. ಈ ಬಗ್ಗೆ ಸರ್ಕಾರದಿಂದಲೇ ಅಧಿಕೃತ ಪರಿಷ್ಕರಣೆ ಮಾಹಿತಿ ಹೊರಬಿದ್ದಿದೆ.