ಅಂಡರ್ ವಾಟರ್‌ ನಲ್ಲಿ ಜಾವೆಲಿನ್ ಎಸೆದ ಚಿನ್ನದ ಹುಡುಗ ನೀರಜ್ ಚೋಪ್ರಾ!

1 min read

ಮಾಳೆ(ಮಾಲ್ಡೀವ್ಸ್),ಅ.2-ಟೊಕಿಯೋ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕಗಳಿಸಿದ ನೀರಜ್ ಚೋಪ್ರಾ ಇದೀಗ ಅಂಡರ್ ವಾಟರ್ ನಲ್ಲಿ ಜಾವೆಲಿನ್ ಎಸೆದಿದ್ದಾರೆ!
ಹೌದು, ನೀರಜ್ ಚೋಪ್ರಾ ಅವರು ಸಮುದ್ರದಡಿಯಲ್ಲಿ ಸ್ಕೂಬಾ ಡೈವಿಂಗ್ ಮಾಡುತ್ತಾ ಜಾವೆಲಿನ್ ಎಸೆಯುವಂತೆ ಮಾಡಿದ್ದಾರೆ. ಇದರ ವಿಡಿಯೋ ಇದೀಗ ವೈರಲ್ ಆಗಿದೆ.

ನೀರಜ್ ಚೋಪ್ರಾ ಇನ್ ಸ್ಟಾಗ್ರಾಂ ಪೋಸ್ಟ್


ಹಾಲಿಡೇ ಮೇಲೆ ಮಾಲ್ಡೀವ್ಸ್ಗೆ ತೆರಳಿರುವ ಚೋಪ್ರಾ ಅಲ್ಲಿ ಸ್ಕೂಬಾ ಡೈವಿಂಗ್ ಮಾಡಿದ್ದಾರೆ.ಈ ವಿಡಿಯೋವನ್ನು ಸ್ವತಃ ನೀರಜ್ ಚೋಪ್ರಾ ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ, ‘ಆಸ್ಮಾನ್ ಪರ್, ಜಮೀನ್ ಪೆ ಯಾ ಅಂಡರ್ವಾಟರ್, ಐ ಆಯಮ್ ಥಿಂಕಿಂಗ್ ಆಫ್ … ಜಾವೆಲಿನ್!'(ಆಕಾಶದಲ್ಲಿ, ನೆಲದ ಮೇಲೆ ಅಥವಾ ನೀರಿನಲ್ಲಿ, ನಾನು ಜಾವೆಲಿನ್ ಬಗ್ಗೆಯೇ ಯೋಚಿಸುತ್ತಿದ್ದೇನೆ) ಎಂದು ಶೀರ್ಷಿಕೆ ನೀಡಿದ್ದಾರೆ. ಜೊತೆಗೆ, ತರಬೇತಿ ಶುರುವಾಗಿ ಬಿಟ್ಟಿದೆ ಎಂದು ಬರೆದಿದ್ದಾರೆ.
ವಿಡಿಯೋಗೆ ಲಕ್ಷಾಂತರ ಅಭಿಮಾನಿಗಳು ಲೈಕ್ಸ್ ಗಳ ಸುರಿಮಳೆಗೈದಿದ್ದಾರೆ. ಸಾವಿರಾರು ಜನ ನಿಮ್ಮ ಶ್ರದ್ಧೆ ಮೆಚ್ಚುವಂಥದ್ದು ಎಂದು ಹೊಗಳಿದ್ದಾರೆ. ಮತ್ತೊಂದೆಡೆ, ಹೈಜಂಪರ್ ತೇಜಸ್ವಿನ್ ಶಂಕರ್ ಅವರು, ‘ವೆಕೇಶನ್ನಲ್ಲೂ ಜಾವೆಲಿನ್ನಾ? ಸ್ವಲ್ಪ ನಿನ್ನ ಮನಸ್ಸು ಮತ್ತು ದೇಹಕ್ಕೆ ವಿಶ್ರಾಂತಿ ಕೊಡಪ್ಪ’ ಎಂದು ಕಾಮೆಂಟ್ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *