ಕೋಟಿ ದಾಟಿದ ನಂಜುಂಡೇಶ್ವರನ ಹುಂಡಿ ಆದಾಯ!
1 min readಮೈಸೂರು : ಲಾಕ್ ಡೌನ್ ನಡುವೆಯು ನಂಜನಗೂಡಿನ ನಂಜುಂಡೇಶ್ವರ ಕೋಟ್ಯಾಧೀಶನಾಗಿದ್ದಾನೆ. ಒಂದೇ ತಿಂಗಳಿನಲ್ಲಿ ನಂಜನಗೂಡಿನ ನಂಜುಂಡೇಶ್ವರ ಕೋಟಿ ಸಾಲಿನ ದೇವರುಗಳಲ್ಲಿ ಒಬ್ಬನಾಗಿದ್ದಾನೆ. ಕೊರೋನಾ ವೇಳೆಯು ಭಕ್ತಾದಿಗಳ ಕಾಣಿಕೆ ಹುಂಡಿ ಭರ್ತಿಯಾಗಿದ್ದು, ಬರೋಬ್ಬರಿ ಒಂದು ತಿಂಗಳಿನಲ್ಲಿ 1,29,73,194 ರೂ.ಸಂಗ್ರಹವಾಗಿದೆ.
ಇದರಲ್ಲಿ 50ಗ್ರಾಂ ಚಿನ್ನ, 8 ಕೆಜಿ 200ಗ್ರಾಂ ಬೆಳ್ಳಿ, 12 ವಿದೇಶಿ ಕರೆನ್ಸಿಗಳು ಹುಂಡಿಯಲ್ಲಿ ಸಂಗ್ರಹವಾಗಿದೆ.
ನಂಜನಗೂಡಿನ ದೇವಸ್ಥಾನದ ಸಿಬ್ಬಂದಿ ಹಾಗೂ ಕಾವೇರಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸಿಬ್ಬಂದಿ ದೇವಸ್ಥಾನದ ಹುಂಡಿಯಲ್ಲಿರುವ ಹಣ ಹಾಗೂ ಚಿನ್ನಾಭರಣ ಎಣಿಕೆ ಮಾಡಿದ್ದಾರೆ.
ಲಾಕ್ ಡೌನ್ ತೆರವು ನಂತರ ನಂಜುಂಡೇಶ್ವರ ದರ್ಶನ ಪಡೆಯಲು ಭಕ್ತಾದಿಗಳ ಸಂಖ್ಯೆ ದಿನೇ ದಿನೇ ಏರುತ್ತಿರುವುದರಿಂದ ಹುಂಡಿಗೆ ಕಾಣಿಕೆ ಹೆಚ್ಚಾಗಿದೆ.