ರಸ್ತೆ ಬದಿಯಲ್ಲಿ ಜೀವನ ಕಳೆಯುತ್ಥಿದ್ದ ಎರಡು ಕುಟುಂಬಗಳಿಗೆ ಆಸರೆಯಾದ ತಹಸೀಲ್ದಾರ್
1 min readನಂಜನಗೂಡು: ರಸ್ತೆ ಬದಿಯಲ್ಲಿ ಜೀವನ ಕಳೆಯುತ್ಥಿದ್ದ ಎರಡು ಕುಟುಂಬಗಳಿಗೆ ತಹಸೀಲ್ದಾರ್ ಆಸರೆಯಾಗಿದ್ದಾರೆ. ನಿರಾಶ್ರಿತರ ಕೇಂದ್ರಕ್ಕೆ ರವಾನಿಸಿ ಮಾನವೀಯತೆ ಮೆರೆದಿದ್ದಾರೆ ನಂಜನಗೂಡು ತಹಸೀಲ್ದಾರ್ ಮೋಹನಕುಮಾರಿ.
ಪಟ್ಟಣದ ಅಂಬೇಡ್ಕರ್ ಭವನದ ಎದುರುಗಡೆ ಬಸ್ ನಿಲ್ದಾಣದಲ್ಲಿ ಎರಡು ಕುಟುಂಬ ಆಶ್ರಯ ಪಡೆದಿತ್ತು. ಆಶ್ರಯವಿಲ್ಲದೆ ಮಳೆಗಾಳಿಯಿಂದ ಕುಟುಂಬ ಪರಿತಪಿಸುತ್ತಿತ್ತು. ತಮ್ಮ ವಾಹನದಲ್ಲಿ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ತಹಸೀಲ್ದಾರ್ ಮೋಹನಕುಮಾರಿ ಅವರ ಕಣ್ಣಿಗೆ ಬಿದ್ದ ನಿರಾಶ್ರಿತ ಕುಟುಂಬ ಬಿದ್ದಿದೆ. ನಿರಾಶ್ರಿತರ ಪರಿಸ್ಥಿತಿಗೆ ಮರುಗಿದ ತಹಸೀಲ್ದಾರ್, ಕೂಡಲೇ ನಿರಾಶ್ರಿತರ ಕೇಂದ್ರದಲ್ಲಿ ಅಶ್ರಯ ನೀಡಲು ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಗ್ರಾಮ ಸಿದ್ದರಾಮನಹುಂಡಿಯ ಶಿವು ಎಂಬ ನಿರಾಶ್ರಿತರ ಕುಟುಂಬ ಮತ್ತು ಬಾಟಲ್ ಮತ್ತು ಚಿಂದಿ ಹಾಯುವ ಕಾಯಕದಲ್ಲಿ ನಿರತರಾಗಿದ್ದ ಕುಟುಂಬವಾಗಿವೆ.
ಇನ್ನು ಕೆಲವು ದಿನಗಳ ಹಿಂದಷ್ಟೆ ವೃದ್ದರನ್ನ ಸ್ವಗ್ರಾಮಕ್ಕೆ ತಲುಪಿಸಿ ಮಾನವೀಯತೆ ಮೆರೆದಿದ್ದ ತಹಸೀಲ್ದಾರ್ ಮತ್ತೊಮ್ಮ ನಿರಾಶ್ರಿತರ ಬಗ್ಗೆ ಕಾಳಜಿ ತೋರಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.