ಕೊರೋನಾ ಲಸಿಕೆ ವಿತರಣೆಯಲ್ಲಿ ಮೈಸೂರು ರಾಜ್ಯದಲ್ಲೇ ‘ನಂಬರ್ 1’
1 min readಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಕೋವಿಡ್ ಲಸಿಕೆ ನೀಡುವ ಜವಾಬ್ದಾರಿಯಲ್ಲಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ.
45 ವರ್ಷ ಮೇಲ್ಪಟ್ಟ ಜನರಿಗೆ ಕೋವಿಡ್ ಲಸಿಕೆ ನೀಡುವ ಜವಾಬ್ದಾರಿಯಲ್ಲಿ ಮೈಸೂರು ಮೊದಲನೇ ಸ್ಥಾನವನ್ನ ಪಡೆದುಕೊಂಡಿದೆ. ಈಗಾಗಲೇ ಬರೋಬ್ಜರಿ 5 ಲಕ್ಷ ಮಂದಿಗೆ ಈಗಾಗಲೇ ಲಸಿಕೆ ನೀಡಿದ್ದು ಇದು ರಾಜ್ಯದಲ್ಲೇ ನಂಬರ್ ಒನ್ ಸ್ಥಾನಕ್ಕೆ ಏರುವಂತೆ ಮಾಡಿದೆ.
ಈ ಬಗ್ಗೆ ಆರೋಗ್ಯ ಸಚಿವರು ಕೂಡ ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದು, ಮೈಸೂರಿನ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಈಗಾಗಲೇ ಮನೆ ಮನೆಗೆ ತೆರಳಿ ಅರಿವು ಮೂಡಿಸಿ ಲಸಿಕೆ ಹಾಕುತ್ತಿರುವ ಜಿಲ್ಲಾಡಳಿತದ ಭಾಗವಾದ ಪಾಲಿಕೆ ಜನರಿಗೆ ತಿಳುವಳಿಕೆ ನೀಡಿ ವಾಕ್ಸಿನ್ ನೀಡುತ್ತಿದ್ದಾರೆ. ಈ ಮೂಲಕ ಕರೋನಾ ಕಟ್ಟಿ ಹಾಕೋಕೆ ಸಕಲ ರೀತಿಯ ಸಿದ್ದತೆಯು ಆಗಿದೆ.