ಸರಗಳ್ಳನೊರ್ವನನ್ನು ಬಂಧಿಸಿದ ಮೈಸೂರು ಗ್ರಾಮಾಂತರ ಸಿಪಿಐ ಮಹೇಶ್, ತಂಡ
1 min read
ಮೈಸೂರು: ಸರಗಳ್ಳನೊರ್ವನನ್ನು ಬಂಧಿಸಿದ ಮೈಸೂರು ಗ್ರಾಮಾಂತರ ಸಿಪಿಐ ಮಹೇಶ್ ಮತ್ತು ತಂಡ. ಗಿರೀಶ್ ಕುಮಾರ್ ಹೆಚ್.ಬಿ ಬಿನ್ ಬಸವಣ್ಣ ಎಂಬುವವನೆ ಬಂಧಿತ ಆಸಾಮಿ . ಈತನು ಇಲವಾಲ,ಜಯಪುರ, ಮೈಸೂರು ದಕ್ಷಿಣ ಠಾಣೆ ಮತ್ತು ಮೈಸೂರು ನಗರದ ಕೆ.ಆರ್.ಪೊಲೀಸ್ ಠಾಣೆಗಳ ಸರಹದ್ದಿನಲ್ಲಿ ತಲಾ ಒಂದು ಪ್ರಕರಣಗಳು ಮತ್ತು ವರುಣಾ ಪೊಲೀಸ್ ಠಾಣೆಯ ಎರಡು ಪ್ರಕರಣಗಳು, ಒಟ್ಟು ಆರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಈತನಿಂದ 147 ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು ಕೃತ್ಯಕ್ಕೆ ಬಳಸಿದ ಒಂದು ಮೋಟಾರ್ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಆರ್.ಚೇತನ್ ಐಪಿಎಸ್ ರವರು ಸದರಿ ಅಪರಾಧ ಪತ್ತೆದಳದ ಕಾರ್ಯವನ್ನು ಶ್ಲಾಘಿಸಿರುತ್ತಾರೆ.
