ಸೋಮವಾರದಿಂದ ಶುಕ್ರವಾರದವರೆಗೆ ಗ್ರಂಥಾಲಯದಲ್ಲಿ ಎರವಲು ಸೇವೆ ಮಾತ್ರ: ಶನಿವಾರ ಭಾನುವಾರ ಸೇವೆ ಇಲ್ಲ
1 min readಮೈಸೂರು: ಕೊವಿಡ್ 19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಏಪ್ರಿಲ್ 24 ರಿಂದ ಮೇ 04ರವರೆಗಿನ ಪ್ರತಿ ಶನಿವಾರ ಹಾಗೂ ಭಾನುವಾರ ಸಾರ್ವಜನಿಕ ಗ್ರಂಥಾಲಯದ ಸೇವೆಯನ್ನು ಸ್ಥಗೀತಗೊಳಿಸಲಾಗುತ್ತದೆ. ಉಳಿದ ದಿನಗಳಲ್ಲಿ ಎರವಲು ಸೇವೆ ಮಾತ್ರ ಲಭ್ಯವಿರುತ್ತದೆ ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕರಾದ ಮಂಜುನಾಥ್ ಬಿ. ಅವರು ತಿಳಿಸಿದ್ದಾರೆ.
ಸೋಮವಾರದಿಂದ ಶುಕ್ರವಾರದ ವರೆಗೆ ಬೆಳಿಗ್ಗೆ 10ಗಂಟೆಯಿಂದ ಸಂಜೆ 5.30ರ ವರೆಗೆ ಗ್ರಂಥಾಲಯದಿಂದ ಪುಸ್ತಕಗಳನ್ನು ಕೊಡುವ ಹಾಗೂ ಹಿಂಪಡೆಯುವ ಕಾರ್ಯಗಳು ಮಾತ್ರ ಇದ್ದು, ಗ್ರಂಥಾಲಯದಲ್ಲೇ ಇದ್ದು ಓದಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಗ್ರಂಥಾಲಯಗಳ ಸಿಬ್ಬಂದಿಗಳು ಕೋವಿಡ್ 19 ಸಂಬಂಧಿತವಾಗಿ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತಪ್ಪದೆ ಅನುಸರಿಸಲು ಸಹ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಪ್ರಕರಣಗಳನ್ನು ಕಡಿಮೆಗೊಳಿಸುವಂತಹ ನಿಟ್ಟಿನಲ್ಲಿ ಮೇ 4ರ ವರೆಗೆ ಅಥವಾ ರಾಜ್ಯ ಸರ್ಕಾರದ ಮುಂದಿನ ಆದೇಶದವರೆಗೆ ಈ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದ್ದಾರೆ.