ರೋಹಿಣಿ ಸಿಂಧೂರಿ – ಶಿಲ್ಪಾನಾಗ್ ವರ್ಗಾವಣೆ: ಮೈಸೂರಿನ ನೂತನ ಡಿಸಿ, ಪಾಲಿಕೆ ಆಯುಕ್ತರಿವರು!
1 min readಮೈಸೂರು: ಮೈಸೂರಿನ ಇಬ್ಬರು ಐಎಎಸ್ ಅಧಿಕಾರಿಗಳ ಜಟಾಪಟಿ ವಿಚಾರ. ಇಬ್ಬರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು ಮೈಸೂರು ನೂತನ ಡಿಸಿ ಮತ್ತು ಪಾಲಿಕೆ ಆಯುಕ್ತರನ್ನು ಸಹ ನೇಮಿಸಿದೆ.
ಮೈಸೂರಿನ ನೂತನ ಜಿಲ್ಲಾಧಿಕಾರಿಯಾಗಿ ಡಾ. ಬಗಾದಿ ಗೌತಮ್ ಮತ್ತು ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾಗಿ ಲಕ್ಷಿಕಾಂತ್ ರೆಡ್ಡಿ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೊದಲು ಡಾ. ಬಗಾದಿ ಗೌತಮ್ ಅವರು ವಾಣಿಜ್ಯ ತೆರಿಗೆ (ಜಾರಿ) ಹೆಚ್ಚುವರಿ ಆಯುಕ್ತರಾಗಿದ್ದರು. ಇನ್ನು ಲಕ್ಷ್ಮೀಕಾಂತ್ ರೆಡ್ಡಿ ಅವರು ಮೈಸೂರು ಪಾಲಿಕೆ ಆಹಾರ ಮತ್ತು ನಾಗರೀಕ ಪೂರೈಕೆ ನಿಗಮದ ಎಂಡಿಯಾಗಿದ್ದರು.
ರೋಹಿಣಿ ಸಿಂಧೂರಿ – ಶಿಲ್ಪಾನಾಗ್ ವರ್ಗಾವಣೆ:
ಡಿಸಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ವರ್ಗಾವಣೆ ಮಾಡಿದ್ದು ರೋಹಿಣಿ ಸಿಂಧೂರಿಯನ್ನ ಧಾರ್ಮಿಕ ದತ್ತಿ ಇಲಾಖೆಗೆ ಹಾಗೂ ಶಿಲ್ಪಾನಾಗ್ ಅವರಿಗೆ ಗ್ರಾಮೀಣಾಭಿವೃದ್ಧಿ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಈ ಮೂಲಕ ಇಬ್ಬರು ಅಧಿಕಾರಿಗಳ ಜಟಾಪಟಿಗೆ ಸರ್ಕಾರ ಟ್ವಿಸ್ಟ್ ಕೊಟ್ಟಿದೆ.