ಮೈಸೂರು ಕನ್ನಡ ವೇದಿಕೆಯಿಂದ ಹಿರಿಯ ಸಾಹಿತಿ ಸಿದ್ದಲಿಂಗಯ್ಯ ಅವರಿಗೆ ಶ್ರದ್ಧಾಂಜಲಿ ಸಲ್ಲಿಕೆ
1 min readಮೈಸೂರು: ನಗರ ಪಾಲಿಕೆಯ -೧ ರ ಕಛೇರಿಯ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಾಡಿನ ಸುಪ್ರಸಿದ್ಧ ಕವಿ ಸಾಹಿತಿ ಹೋರಾಟಗಾರ ನಾಡೋಜ ಡಾ.ಸಿದ್ದಲಿಂಗಯ್ಯ ಅವರು ನಾಡಿಗೆ ಸಾಹಿತಿಕ ಸಾಧನೆ ಮತ್ತು ಕನ್ನಡ ಪರ ಹೋರಾಟಕವನ್ನ ಸ್ಮರಿಸಿ ಅವರ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡಿ ಸಂತಾಪ ವ್ಯಕ್ತ ಪಡಿಸಲಾಯಿತು.
ಈ ಸಂಧರ್ಭದಲ್ಲಿ ನುಡಿನಮನ ಸಲ್ಲಿಸಿದ ಮಾತನಾಡಿದ ಸಾಹಿತಿ ಬನ್ನೂರು ಕೆ. ರಾಜು ,ಕವಿ ಸಿದ್ಧಲಿಂಗಯ್ಯ ಅವರು ಕೇವಲ ಒಂದು ವರ್ಗದ ಕವಿಯಾಗಿರಲಿಲ. ಸಮಗ್ರ ಕನ್ನಡಿಗರ ಕವಿಯಾಗಿದ್ದರು ಆದ್ದರಿಂದ ಅವರನ್ನು ದಲಿತ ಕವಿ ಎನ್ನುವುದಕ್ಕಿಂತ ಕನ್ನಡದ ಸ್ವಾಭಿಮಾನಿ ಕವಿ ಎನ್ನುವುದು ಸೂಕ್ತ. ಸಿದ್ದಲಿಂಗಯ್ಯ ನವರು ಕೂಡ ಹಾಗೇಯಿದ್ದರು ಅವರ ಬರಹಗಳಲ್ಲಿ ,ಭಾಷಣಗಳಲ್ಲಿ ,ನಡೆ ನುಡಿ ಗಳಲ್ಲಿ ನಾವು ಇದ್ದನ್ನೇ ಕಾಣಬಹುದಾಗಿತ್ತು ಕನ್ನಡ ಸಾಹಿತ್ಯದ ಬಹುತೇಕ ಎಲ್ಲಾ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಸಿದ್ದಲಿಂಗಯ್ಯ ರವರು ಕನ್ನಡ ಕಟ್ಟುವಲೀ ಬಹುಮುಖ್ಯ ಪಾತ್ರವಹಿಸಿದ್ದರು. ಆದ್ದರಿಂದ ಅವರ ಬದುಕು ಬರಹ ಸಾಧನೆ ಸಿದ್ದೀಯನ್ನು ಸ್ಮರಿಸಲು, ಮುಂದಿನ ಪಿಳೀಗೆಗೆ ಆದರ್ಶವಾಗಿರಿಸಲೂ ನಮ್ಮ ಘನ ಸರಕಾರ ಸ್ಮಾರಕದಂತಹ, ಪ್ರತಿಮೆಯಂತಹ ಸ್ಥಾವರ ಗೊಳಿಸದೆ ಜಂಗಮ್ಮಗೊಳಿಸುವಂತಹ ಸಾರ್ಥಕ ವಾದ ಕೆಲಸವನ್ನು ಮಾಡಬೇಕು ಈ ನಿಟ್ಟಿನಲ್ಲಿ ಶೋಸಿತರಿಗೆ,ಅಸಹಾಯಕ ರಿಗೆ, ದೀನ ದಲಿತರಿಗೆ ಶೈಕ್ಷಣಿಕವಾಗಿ ಇವರ ಹೆಸರಿನಲ್ಲಿ ನೆರವಾಗುವಂತಹ ಕಾರ್ಯವನ್ನು ಮಾಡಲು ಪ್ರಾಧಿಕಾರದ ಮಾದರಿಯಲ್ಲಿ ಟ್ರಸ್ಟವೊಂದನ್ನು ಸ್ಥಾಪಿಸಿ ಬೇಕೆಂದು ಸರಕಾರಕ್ಕೆ ಮನವಿ ಮಾಡಿದರು.
ಮೂಲತಹ ಬಂಡಾಯದಿಂದ ಮೇಲೆದ್ದ ಕ್ರಾಂತಿಕಾರಿ ಕವಿಯಾದ ಸಿದ್ದಲಿಂಗಯ್ಯ ರವರು ಒಳ್ಳೆಯ ಪ್ರೇಮ ಕವಿಯೂ ಹೌದು. ಗೆಳತಿ ಓ ಗೆಳತಿ ಅಪ್ಪಿಕೊ ಎನ್ನ ಅಪ್ಪಿಕೊ ….ಹಾಗೂ ಆ ಬೆಟ್ಟದಲ್ಲಿ ಆ ಬೆಳದಿಂಗಳಲ್ಲಿ ಸುಳಿದಾಡ ಬೇಡ ಗೆಳತಿ ಅಂತಹ ನವೀರಾದ ಪ್ರೇಮ ಗೀತೆಗಳನ್ನು ಕೊಟ್ಟವರು ಇವರು. ವ್ಯಕ್ತಿ ಚಿತ್ತಣ ಗೀತೆಗಳನ್ನು ಬರೆಯುವದರಲಿ ಸಿದ್ದ ಹಸ್ತರಾಗಿದ ಇವರು ನಾಡನಡುವಿನಿಂದ ಹಿಡಿದ ನೋವಿನ ಕೊಗೆ ಆಕಾಶದ ಹಗಲಕ್ಕೂ ನಿಂತ ಆಲದ ಮರ ವೇ ಎಂಬ ಒಂದೇ ಒಂದು ಕವಿತೆಯ ಮೂಲಕ ಬಾಬ ಸಾಹೇಬರ ಬದುಕನ್ನು ಕಟ್ಟಿ ಕೊಟ್ಟ ರಾಷ್ಟ್ರದ ಏಕೈಕ ಕವಿ ಸಿದ್ದಲಿಂಗಯ್ಯ ನವರು ಎಂದು ಹೇಳಿದರು.
ಈ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಎಸ್.ಬಾಲಕೃಷ್ಣ ರವರು, ಅಗಲಿದ ಕವಿ ಸಿದ್ದಲಿಂಗಯ್ಯ ನವರು ಕನ್ನಡ ನಾಡು ಕಂಡಂತಹ ಮಹಾನ್ ಪ್ರತಿಭೆಯಾಗಿದು ಅವರ ಅಗಲಿಕೆ ಇಡೀ ಕನ್ನಡ ನಾಡಿಗೆ ಅಪಾರ ನಷ್ಟವಾಗಿದೆ. ಇವರು ಕನ್ನಡ ಪುಸ್ತಕದ ಅಧ್ಯಕ್ಷರಾಗಿದಾಗ ಇವರು ಮಾಡಿದಂತಹ ಕನ್ನಡ ಪರ ಕೆಲಸಗಳು ಇವತ್ತಿಗೂ ಮಾದರಿಯಾಗಿದೆ ಹಿಂದಿನ ಕನ್ನಡ ಪ್ರಾಧಿಕಾರದ ಅಧ್ಯಕ್ಷರು ಯಾರೇಂಬುದೆ ತಿಳಿಯದ ಹಾಗೇ ನಿಷ್ಕೀಯ ರಾಗಿದ್ದಾರೆ ಆದರೆ ಸಿದ್ದಲಿಂಗಯ್ಯ ಪ್ರಾಧಿಕಾರ ದ ಅಧ್ಯಕ್ಷರಾಗಿದ್ದ ಅವಧಿ ಯಲ್ಲಿ ತಮ್ಮ ಗಟ್ಟಿ ಕೆಲಸಗಳಿಂದ, ಗಟ್ಟಿ ಧ್ವನಿಯಿಂದ ಕನ್ನಡ ವಿರೋಧಿ ಗಳಿಗೆ ಸಿಂಹ ಸ್ವಪ್ನವಾಗಿದ್ದರು ಎಂದು ಹೇಳಿದ ಬಾಲಕೃಷ್ಣ ರವರು ಇಂಥಹ ಹೋರಾಟಗಾರ ಸಾಹಿತ್ಯ ಸಾಧನೆಯನ್ನು ಸ್ಮರಿಸುವಂತಹ ಕೆಲಸವನ್ನೂ ಕನ್ನಡ ಅಭಿವೃದ್ಧಿಪ್ರಾಧಿಕಾರವು ಮಾಡಬೇಕಿದೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ವೇದಿಕೆಯ ನಾಲಬೀದಿ ರವಿ, ಗುರುಬಸಪ್ಪ, ಗೋಪಿ, ಮದನ್, ಕನ್ನಡ ಕಾವಲು ಪಡೆಯ ಅಧ್ಯಕ್ಷರ ಮೋಹನ್ ಕುಮಾರ್ ಗೌಡ ಉಪಸ್ಥಿತಿಯಿದ್ದರು.