ಡೆಲ್ಟಾ ಪ್ಲಸ್ ವೈರಸ್ ಪತ್ತೆ: ಯಾರೂ ಆತಂಕ ಪಡಬೇಕಾಗಿಲ್ಲ ಎಂದ ಮೈಸೂರು ಡಿಹೆಚ್‌ಓ
1 min readಮೈಸೂರು: ಮೈಸೂರಿನ ಒಬ್ಬ ವ್ಯಕ್ತಿಯಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾದ ಹಿನ್ನೆಲೆ ಇದರಿಂದ ಯಾರೂ ಆತಂಕ ಪಡಬೇಕಾಗಿಲ್ಲ ಅಂತ ಮೈಸೂರು ಜಿಲ್ಲಾ ಆರೀಗ್ಯಾಧಿಕಾರಿ(ಡಿಹೆಚ್‌ಓ) ಡಾ.ಕೆ.ಹೆಚ್.ಪ್ರಸಾದ್ ಹೇಳಿದ್ದಾರೆ.
ಮೇ 2 ರಂದು ಸ್ಯಾಂಪಲ್ ಕೊಟ್ಟು ಮೇ4 ರಂದು ಕೊರೊನಾ ದೃಢ ಆಗಿತ್ತು. ಆತ ಈಗ ಸಂಪೂರ್ಣ ಗುಣಮುಖ ಆಗಿದ್ದಾನೆ. ಪ್ರತಿ ತಿಂಗಳು ಜಿಲ್ಲೆಯಿಂದ 40 ಸ್ಯಾಪ್ ಕಳುಹಿಸಲಾಗುತ್ತೆ. ರ್ಯಾಂಡಮ್ ಆಗಿ ಕಳುಹಿಸಿದ 40 ಸ್ಯಾಂಪಲ್‌ನಲ್ಲಿ ಒಂದು ಡೆಲ್ಟಾ ಫ್ಲಸ್ ಸೋಂಕು ಇರೋದು ಗೊತ್ತಾಗಿದೆ. ನಾವು ತಕ್ಷಣ ಕಾರ್ಯಪ್ರವೃತ್ತರಾದೆವು. ಪ್ರಥಮ ಹಾಗೂ ಸೆಕೆಂಡರಿ ಸೋಂಕಿತನ ಸಂಪರ್ಕಿತರ ಮೇಲೆ ನಿಗಾ ಮಾಡಲಾಗಿದೆ. ಸದ್ಯಕ್ಕೆ ಯಾವುದೇ ಆತಂಕ ಇಲ್ಲ. ಹೆಚ್ಚು ಹರಡುವಿಕೆಯ ಲಕ್ಷಣ ಇರುವುದರಿಂದ ಮತ್ತಷ್ಟು ಎಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು.